ಬಂಟ್ವಾಳ :ತಾಲೂಕಿನ ಅಮುಂಜೆ ಗ್ರಾಮದ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಯುವಕ ಸಂಘ(ರಿ) ಬಾರಿಂಜೆ ದಾಸಿಮಾರ್ ಇದರ ವತಿಯಿಂದ ಎಸ್.ಎಸ್.ಎಲ್.ಸಿ.ಯಲ್ಲಿ 96.80% ಅಂಕ ಗಳಿಸಿದ ಗ್ರಾಮದ ಸಾಧಕ ಪ್ರತಿಭೆ ಕುಮಾರಿ ಸ್ತುತಿ ಕೆ ಕುಲಾಲ್ ಅವರಿಗೆ ಅಭಿನಂದನೆ ಮತ್ತು ಅಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಸ್ಥಳೀಯ ಆಯ್ದ ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಮತ್ತು ಛತ್ರಿ ವಿತರಣಾ ಕಾರ್ಯಕ್ರಮವು ಅಮುಂಜೆ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಸ್ಥಾಪಕಾಧ್ಯಕ್ಷರಾದ ಚಂದ್ರಹಾಸಶೆಟ್ಟಿಗಾರ್ ಬೆಂಜನಪದವು ವಹಿಸಿದ್

ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ಡಿ.ಎ.ನಾಗೇಶ್ ರಾವ್, ಅಮುಂಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪೊಳಲಿ ರಾಧಾಕೃಷ್ಣ ತಂತ್ರಿ, ಉಧ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ನಾಟಿ ವೈದ್ಯ ಈಶ್ವರ ಪೂಜಾರಿ ಕಲಾಯಿ, ಸಂಘದ ಪ್ರಮುಖರಾದ ನಿತೇಶ್ ಎಂ ಭಂಡಾರಿ
ಬಾರಿಂಜೆ ಹೊಸಮನೆ, ಕಾರ್ತಿಕ್ ಬಲ್ಲಾಳ್ ಅಮುಂಜೆ ಗುತ್ತು, ನವೀನ್ ಪೂಜಾರಿ ಬಾರಿಂಜೆ, ದಿವ್ಯರಾಜ್ ಮುಡಾಯಿಕೋಡಿ, ಪೊಳಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಡಿ.ಎ.ಅಬೂಬಕ್ಕರ್ ಅಮುಂಜೆ, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಮುಂಜೆಯ ಸಹಶಿಕ್ಷಕ ಬಾಲಕೃಷ್ಣ .ಕೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೊಳಲಿ ವಲಯದ ಮೇಲ್ವಿಚಾರಕಿ ರೂಪಾ ಜೆ ರೈ, ವೀರಯೋಧ ಯಾಧವ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಉದಯ ಕೆ ಅಮುಂಜೆ ಅತಿಥಿಗಳಾಗಿ ಭಾಗವಹಿಸಿದ್ದರು.

ದೇ ವೇಳೆ ಶೇ. 96.80 ಅಂಕ ಗಳಿಸಿದ ಗ್ರಾಮದ ಸಾಧಕ ಪ್ರತಿಭೆ ಕುಮಾರಿ ಸ್ತುತಿ ಕೆ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಕು. ಸಿಂಚನಾ ಅವರು ಅಭಿನಂದನಾ ಪತ್ರವನ್ನು ವಾಚಿಸಿದರು. ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ 94 ಅಂಕ ಗಳಿಸಿದ ಕೃತಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಲ್ ಕೆ ಜಿಯಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಮತ್ತು ಛತ್ರಿಗಳನ್ನುವಿತರಿಸಲಾಯಿತು. ಸಂಘದ ಅಧ್ಯಕ್ಷ ಜನಾರ್ದನ ಆರ್ ಬಾರಿಂಜೆ ಸ್ವಾಗತಿಸಿದರು.ಜನಾರ್ದನ ಬಾರಿಂಜೆ ವಂದಿಸಿದರು, ಸಂಘಟಕ ಬಿ. ಜನಾರ್ದನ ಅಮುಂಜೆ ಕಾರ್ಯಕ್ರಮ ನಿರೂಪಿಸಿದರು.
