ಬಂಟ್ವಾಳ : ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಡ್ಕ-ಬಾಳ್ತಿಲ ವತಿಯಿಂದ ನರಿಕೊಂಬು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷಯರೋಗ ತಪಾಸಣಾ ಹಾಗೂ ಹೃದಯ ಎಕ್ಸ್-ರೇ ಶಿಬಿರ ನಡೆಯಿತು.
ಕೇಂದ್ರ ಟಿಬಿ ವಿಭಾಗವು ನರಿಕೊಂಬು ಗ್ರಾಮವನ್ನು “ಹೈ ರಿಸ್ಕ್ ವಿಲೇಜ್” ಎಂದು ಗುರುತಿಸಿದ್ದ ಹಿನ್ನೆಲೆಯಲ್ಲಿ, ಪಿಎಚ್ಸಿ ಕಲ್ಲಡ್ಕ-ಬಾಳ್ತಿಲ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಈ ಶಿಬಿರವನ್ನು ಆಯೋಜಿಸಿದ್ದರು.ಶಿಬಿರಕ್ಕಾಗಿ ಡಿಜಿಟಲ್ ಚೇಸ್ಟ್ ಎಕ್ಸ್-ರೇ ಸೌಲಭ್ಯವನ್ನು ದಕ್ಷಿಣ ಕನ್ನಡ ಜಿಲ್ಲಾ ಕ್ಷಯರೋಗ ಕೇಂದ್ರದ ಮೂಲಕ ಒದಗಿಸಲಾಗಿತ್ತು.

ಶಿಬಿರದಲ್ಲಿ ಒಟ್ಟು 102 ಮಂದಿ ತಪಾಸಣೆಗೊಳಗಾದರು.
ಕಲ್ಲಡ್ಕ-ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್ಒಗಳು,ತಾಲೂಕು ಆರೋಗ್ಯ ಕಚೇರಿಯ ಟಿಬಿ ಮೇಲ್ವಿಚಾರಕರು,ಜಿಲ್ಲಾ ತಂಡದ ರೇಡಿಯೋಗ್ರಫಿ ಇಮೇಜಿಂಗ್ ಅಧಿಕಾರಿಗಳು, ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಭಾಗವಹಿಸಿದ್ದರು.
