ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ  ಹೇಮಾವತಿ ವಿ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯ ತಾಲೂಕಿನ ಅಶಕ್ತರಿಗೆ ಹಣ್ಣು ಹಂಪಲು ವಿತರಿಸಲಾಯಿತು.

ತಾಲೂಕಿನಲ್ಲಿ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವ ಯೋಜನೆಯಿಂದ ಮಾಶಾಸನ ಪಡೆಯುವ  89 ಮಂದಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ತಾಲೂಕಿನಲ್ಲಿ ಒಟ್ಟು 89 ಮಂದಿ ಅಶಕ್ತರನ್ನು ಗುರುತಿಸಿ ಪ್ರತಿ ತಿಂಗಳು ತಲಾ 1000 ದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಾಶಾಸನ ಒದಗಿಸಲಾಗುತ್ತಿದೆ.ಪೌಷ್ಟಿಕಾಂಶದ ಕೊರತೆ ಎದುರಿಸುತ್ತಿರುವ 4 ಮಂದಿಗೆ ವಾತ್ಸಲ್ಯ ಮಿಕ್ಸ್ ಪೌಷ್ಟಿಕಾಂಶ ಆಹಾರಗಳನ್ನು,
11 ಮಂದಿ ನಿರ್ಗತಿಕರಿಗೆ ದಿನ ನಿತ್ಯದ ಗೃಹ ಉಪಯೋಗಿ ಪರಿಕರಗಳ ಕಿಟ್ ನೀಡಲಾಗುತಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ, ತಾಲೂಕಿನ ಎಲ್ಲಾ ವಲಯ ಮೇಲ್ವಿಚಾರಕರು, ಕೃಷಿ ಅಧಿಕಾರಿ, ಸೇವಾ ಪ್ರತಿನಿಧಿಗಳು, ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಒಕ್ಕೂಟಗಳ ಪದಾಧಿಕಾರಿಗಳು, ಸಂಘದ ಸದಸ್ಯರುಗಳು  ಈ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

By suddi9

Leave a Reply

Your email address will not be published. Required fields are marked *