ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಪುಂಜಾಲಕಟ್ಟೆ ಘಟಕದ ದ್ವಿವಾರ್ಷಿಕ ಮಹಾಸಭೆ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಸಭಾಂಗಣದಲ್ಲಿ ನಡೆಯಿತು.
ಅತಿಥಿಯಾಗಿ ಭಾಗವಹಿಸಿದ್ದ  ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರ ಸಮಿತಿ ಸದಸ್ಯ , ಹಿರಿಯ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಮಾತನಾಡಿ, ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಅವರ ದೂರ ದೃಷ್ಠಿತ್ವದಿಂದ ಅಶಕ್ತ ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ಸ್ಥಾಪಿತವಾದ ಯಕ್ಷಧ್ರುವ ಪಟ್ಲ ಫೌಂಡೇಶನ್ ಈಗಾಗಲೇ ಸಾವಿರಾರು ಕಲಾವಿದರ ಪಾಲಿಗೆ ಬೆಳಕಾಗಿದೆ. ಇಂತಹ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಕಾರ್ಯ. ಗ್ರಾಮೀಣ ಪ್ರದೇಶದಲ್ಲಿ ಯಕ್ಷ ಶಿಕ್ಷಣ ಸಹಿತ ಯಕ್ಷಗಾನ ಸೇವೆ ಗೈಯ್ಯುತ್ತಿರುವ ಪುಂಜಾಲಕಟ್ಟೆ ಘಟಕದ ಕಾರ್ಯ ಅಭಿನಂದನೀಯ ಎಂದು ಹೇಳಿದರು.

ಘಟಕದ ಗೌರವ ಮಾರ್ಗದರ್ಶಕರಾದ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಅವರು ಮಾತನಾಡಿ, ಪಟ್ಲ ಫೌಂಡೇಶನ್ ಮೂಲಕ ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಲು ಸಹಕಾರಿಯಾಗಿದೆ ಎಂದರು. 
 ಘಟಕದ  ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಽಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಉದ್ಯಮಿ ಹರೀಂದ್ರ ಪೈ ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಮಾರ್ಗದರ್ಶಕರಾಗಿ  ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ಗೌರವಾಧ್ಯಕ್ಷರಾಗಿ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ, ಉಪಾಧ್ಯಕ್ಷರಾಗಿ ದಿವಾಕರ್ ದಾಸ್ ಕಾವಳಕಟ್ಟೆ, ಉದಯ್ ಕುಮಾರ್ ಶೆಟ್ಟಿ  ಮೇಲ್ಮನೆ, ಗೌರವ ಸಲಹೆಗಾರರಾಗಿ ಯಶೋಧರ ಶೆಟ್ಟಿ ದಂಡೆ, ವಸಂತ ಶೆಟ್ಟಿ ಕೇದಗೆ ,ಸಂಚಾಲಕರಾಗಿ  ರಮೇಶ್ ಶೆಟ್ಟಿ ಮಜಲೋಡಿ , ಸಹ ಸಂಚಾಲಕರಾಗಿ ದಿನೇಶ್ ಶೆಟ್ಟಿ ಕಾವಳಕಟ್ಟೆ  ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಆಚಾರ್ಯ ಬೆರ್ಕಳ, ಜತೆ ಕಾರ್ಯದರ್ಶಿ: ದಿನಕರ್ ಶೆಟ್ಟಿ ಅಂಕದಳ, ಕೋಶಾಧಿಕಾರಿ: ನವೀನ್ ಶೆಟ್ಟಿ ಸೇವಾ ಹಾಗೂ
 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಲೆಕ್ಕಪತ್ರ , ವರದಿ ಪುಸ್ತಕಗಳನ್ನು ನಉತನ ಸಮಿತಿ ಹಸ್ತಾಂತರಿಸಲಾಯಿತು.
ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ, ವಸಂತ ಶೆಟ್ಟಿ ಕೇದಗೆ, ಹರೀಶ್ ಪ್ರಭು, ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್, ಮಹಿಳಾ ಘಟಕದ ಅಧ್ಯಕ್ಷೆ ಉಮಾ ಡಿ. ಗೌಡ, ಸಂಚಾಲಕಿ ಆಶಾ ದಿನಕರ್ , ಪ್ರಧಾನ ಕಾರ್ಯದರ್ಶಿ ಸೌಮ್ಯ ಮಹಾಬಲ ಶೆಟ್ಟಿ ಉಪಸ್ಥಿತರಿದ್ದರು.
ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಲೆಕ್ಕ ಪತ್ರ ಮಂಡಿಸಿದರು  ಸತೀಶ್ ಆಚಾರ್ಯ ಬೆರ್ಕಳ ವಂದಿಸಿದರು.ಹರೀಶ್ಚಂದ್ರ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು

By Suddi9

Leave a Reply

Your email address will not be published. Required fields are marked *