ಬಂಟ್ಚಾಳ : ಇಲ್ಲಿಯ ನಗರದ ನಂದನಹಿತ್ಲು ಶ್ರೀ ವೈದ್ಯನಾಥ,ಅರಸು, ಜುಮಾದಿ ಬಂಟ ದೈವಸ್ಥಾನದ ವರ್ಷಾವಧಿ ಉತ್ಸವವು ಎ.1 ರಿಂದ 3 ರವರೆಗೆ ನಡೆಯಲಿರುವ ಪ್ರಯುಕ್ತ ಕೋಳಿಕುಂಟವು ಮಂಗಳವಾರ ನೆರವೇರಿತು.

ಈ ಸಂದರ್ಭ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಕ್ಷೇತ್ರದ ಮನೆತನದವರಾದ ವಿಶ್ವನಾಥ ಪೊಣ್ಣಂಗಿಲಗುತ್ತು,ಲೋಕೇಶ್ ಬಂಗೇರಗಾಣದಪಡ್ಪು,ಲೋಕನಾಥ ಬಡಕೊಟ್ಟು, ಸಂಜೀವ ಪೆಲತ್ತಿಮಾರು ಹಾಗೂ ಸ್ಥಳೀಯ ಪ್ರಮುಖರು,ಗ್ರಾಮಸ್ಥರು, ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಪುನರ್ ಕಲಶಾಭಿಷೇಕ ಪ್ರಯುಕ್ತ ಮಾ. 30 ರಂದು ಸಂಜೆ ವೈಧಿಕ ವಿಧಿ ವಿಧನಗಳು ನಡೆಯಲಿದೆ.ಮಾ.31 ರಂದು ಕಲಶಾಭಿಷೇಕ,ನಾಗತಂಬಿಲ ಸೇವೆ ಬಳಿಕ ಹಿಂದುಯುವ ಸೇನೆ ಬಂಟ್ವಾಳ ತಾಲೂಕು ಹಾಗೂ ಕ್ಷೇತ್ರದ ಅಡಳಿತ ಸಮಿತಿ ವತಿಯಿಂದ ನಿರ್ಮಿಸಲಾದ ನೂತನ ದ್ವಾರದ ಉದ್ಘಾಟನೆ ನಡೆಯಲಿದೆ.


