ಪೊಳಲಿ:ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವ ಮಾರ್ಚ್ 14ರಂದು ರಾತ್ರಿ ದ್ವಜರೋಹಣಗೊಂಡು ಈ ಬಾರಿ 29 ದಿನಗಳ ಜಾತ್ರೆ ನಡೆಯಲಿದೆ. ಮಾರ್ಚ್ 15ರಂದು ಬೆಳಗ್ಗೆ ದೀಪದ ಬಳಿ ಕಂಚಿಲು ಸೇವೆಯೊಂದಿಗೆ ಚಿಕ್ಕ ರಥದಲ್ಲಿ ದೇವರ ಉತ್ಸವ ಮೂರ್ತಿಯನ್ನು ದೇವಳದ ರಥ ಬೀದಿಯಲ್ಲಿ ಎಳೆಯಲಾಯಿತು.

ನಂತರ ನಟ್ಟೋಜರು ಹಿಂಗಾರದ ಹಾಳೆಯೊಂದಿಗೆ ದುರ್ಗಾಪರಮೇಶ್ವರೀ ದೇವಿಯ ಗುಡಿಯ ಹಿಂಬಾಗದಲ್ಲಿ ನಿಂತಿರುವ ಸೇರಿಗಾರನ ಕೈಯಲ್ಲಿ ಕೊಟ್ಟು ಕಿವಿಯಲ್ಲಿ ಆರಢದ ದಿನವನ್ನು ತಿಳಿಸುತ್ತಾರೆ. ನಂತರ ಭಗವತಿ ದೇವಿಯ ಅವೇಶದಲ್ಲಿದ್ದ ಪಂಬದನ ಕೈಯಲ್ಲಿ ಶೇರಿಗಾರನು ಹಿಂಗಾರದ ಹಾಳೆಯನ್ನು ಕೊಟ್ಟು ಕಿವಿಯಲ್ಲಿ ಗುಟ್ಟಾಗಿ ಆರಡದ ದಿನವನ್ನು ತಿಳಿಸುತ್ತಾನೆ. ಆಗ ಸಾವಿರ ಸೀಮೆಯ ಭಕ್ತರು , ತಂತ್ರಿಗಳು, ಅರ್ಚಕರು ,ಗುತ್ತಿನವರು ಅಮ್ಮನವರ ಜಾತ್ರೆಯ ದಿನ ತಿಳಿದುಕೊಳ್ಳಲು ಬಹಳ ಕುತುಹಲದಿಂದ ಕಾದು ಕುಳಿತ್ತಿರುತ್ತಾರೆ. ಆಗ ಪಂಬದನು ಮೂರು ಬಾರಿ ಕೂಗಿ “ಇರುವತ್ತೊರುಂಬ ಪೊಪಿನಾನಿ ಆರಡ” (29 ದಿವಸದ) ಅಂತ ತುಳುವಿನಲ್ಲಿ ಜೋರಾಗಿ ಹೇಳುತ್ತಾನೆ ಈಗೆ ಪೊಳಲಿ ಜಾತ್ರೆಯ ಒಂದು ತಿಂಗಳ ಜಾತ್ರೆಯ ಗೌಪ್ಯವಾಗಿಡಲಾದ ದಿನವನ್ನು ತಿಳಿಸುತ್ತಾರೆ.

ಈ ಸಲ 29 ದಿನದ ಜಾತ್ರೆ ನಡೆಯಲಿದೆ ಏಪ್ರಿಲ್ 6ರಂದು ಸೋಮವಾರ ಪ್ರಥಮ ಚೆಂಡು,7 ರಂದು ಮಂಗಳವಾರ ಎರಡನೆ ಚೆಂಡು, 8 ರಂದು ಬುಧವಾರ ಮೂರನೆ ಚೆಂಡು, 9ರಂದು ಗುರುವಾರ ನಾಲ್ಕನೇ ಚೆಂಡು, 10 ರಂದು ಶುಕ್ರವಾರ ಕಡೆ ಚೆಂಡು, 11 ರಂದು ಶನಿವಾರ ರಥೋತ್ಸವ ನಡೆಯಲಿದೆ.12 ರಂದು ಭಾನುವಾರ ಆರಡ ಈಗೇ ಇಪ್ಪತೊಂಬತ್ತು ದಿನದ ಜಾತ್ರೆಯು ನಡೆಯಲಿದೆ.
ತೀಯಾ ಸಮಾಜ ಬಾಂಧವರ ಕೇಂದ್ರಸ್ಥಾನವಾದ ಶ್ರೀ ಕ್ಷೇತ್ರ ನಂದ್ಯದಿಂದ ಶ್ರೀ ಭಗವತೀ ಮಾತೆಯ ಭಂಡಾರವು ಸೂಟೆಯ ಬೆಳಕಿನಲ್ಲಿ ಪಲ್ಗುಣಿ ನದಿ ತಟಕ್ಕೆ ಬಂದು ಅಲ್ಲಿಂದ ದೋಣಿಯ ಮುಖಾಂತರ ನದಿ ದಾಟಿ ತೀಯಾ ಸಮಾಜದ ಗುರಿಕಾರರಿಗೆ ಪ್ರಸಾದ ನೀಡಿ ಆ ಬಳಿಕ ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ದೇವಸ್ಥಾನದ ಧ್ವಜಾರೋಹಣ ನಡೆಯುವುದು ಸಂಪ್ರದಾಯ.
ಮರುದಿನ ಪುನಃ ಮೊದಲ ದಿನದಂತೆ ಪೊಳಲಿ ಕ್ಷೇತ್ರದಲ್ಲಿ ಆರಢ ಕರೆದು
ಅವರನ್ನು ದೋಣಿಯ ಮೂಲಕ ಪಲ್ಗುಣಿ ನದಿ ದಾಟಿಸಿ, ನಂದ್ಯ ಕ್ಷೇತ್ರಕ್ಕೆ ಬರಮಾಡಿಕೊಂಡು ಅಲ್ಲಿ ಶ್ರೀ ಭಗವತೀ ಸಾನಿಧ್ಯದಲ್ಲಿ ಆರಢ ಕರೆಯುವುದು ಅನಾದಿ ಕಾಲದ ಅವಿನಾಭಾವ ಸಂಪ್ರದಾಯವಾಗಿದೆ.

