ಬಂಟ್ವಾಳ : ವಿಜ್ಞಾನದ ರಹಸ್ಯಗಳನ್ನು ಕೌತುಕದಿಂದ ಪ್ರಶ್ನಿಸುವ ಸಾಮರ್ಥ್ಯ ಬೆಳೆಸಿಕೊಂಡಲ್ಲಿ  ವಿದ್ಯಾರ್ಥಿಗಳು ಸೃಜನಶೀಲವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಏಮಾಜೆ ದ. ಕ. ಜಿ. ಪಂ. ಕಿ. ಪ್ರಾ ಶಾಲೆಯ ಎಸ್. ಡಿ. ಎಂ. ಸಿ ಉಪಾಧ್ಯಕ್ಷರಾದ  ಹರೀಶ್ ಕುಲಾಲ್ ಹೇಳಿದರು.
ಶಾಲೆಯಲ್ಲಿ ನಡೆದ ವಿಜ್ಞಾನ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

 

ಕಂಬಳಬೆಟ್ಟು ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ  ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ಪ್ರಯೋಗಗಳನ್ನು ಪ್ರದರ್ಶಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.  ಸಂಪನ್ಮೂಲ ವ್ಯಕ್ತಿಗಳಾಗಿ ಬಾಳ್ತಿಲ ಕಂಟಿಕ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ  ಚೇತನಾ,ರಂಗಭೂಮಿ ಕಲಾವಿದರಾದ ಚಂದ್ರಹಾಸ ಶೆಟ್ಟಿ ಮಾಣಿ ಉಪಸ್ಥಿತರಿದ್ದರು. 
.ಶಾಲಾ  ಮುಖ್ಯ ಶಿಕ್ಷಕಿ  ತ್ರಿವೇಣಿ ಸ್ವಾಗತಿಸಿ, ಸಹಶಿಕ್ಷಕರಾದ ಉದಯಚಂದ್ರ ಕೆ. ಎಸ್ ವಂದಿಸಿದರು. ಗೌರವಶಿಕ್ಷಕಿ ಶಿಕ್ಷಕಿ  ದೀಕ್ಷಾ, ಐಸಮ್ಮ ಸಹಕರಿಸಿದರು. ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *