ಬಂಟ್ವಾಳ: ಶ್ರೀ ಗುರು ಫ್ರೆಂಡ್ಸ್(ರಿ.)ಬೊಂಡಾಲ ಇದರ ೨೬ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಮಹಾಗಣಪತಿ ದೇವಾಸ್ಥಾನದ ವಠಾರದಲ್ಲಿ ನಡೆಯುವ ಮಹಾ ಮೃತ್ಯುಂಜಯ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದ ಸುಮುಖ ಭವನದಲ್ಲಿ ನಡೆಯಿತು. 

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಗ್ರಾಮಸ್ಥರೆಲ್ಲರೂ ಈ ಯಾಗದಲ್ಲಿ  ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಲ್ಲಿ ಸಹಕರಿಸುವಂತೆ ಕೋರಿದರು.
 
 ದೇವಸ್ಥಾನದ ಪ್ರಧಾನ ಅರ್ಚಕರಾದ ಮಾದಕಟ್ಟೆ ಈಶ್ವರ ಭಟ್ ಅವರು ಯಾಗದ ಬಗ್ಗೆ ಮಾಹಿತಿ ನೀಡಿದರು.
 
ದೇವಸ್ಥಾನದ ಆಡಳಿತ ಮೊಕ್ತೇಸರರು ಜಯರಾಮ್ ಹೊಳ್ಳ ನಾಗ್ತಿಮಾರ್ ಶುಭ ಹಾರೈಸಿದರು.
ವೇದಿಕೆಯಲ್ಲಿ ದೇವಸ್ಥಾನದ ಆರ್ಚಕರಾದ ಶಿವಪ್ರಸಾದ್ ಭಟ್, ಶ್ರೀಗುರು ಫ್ರೆಂಡ್ಸ್ ಮ ಗೌರವಾಧ್ಯಕ್ಷರಾದ ಸದಾಶಿವ ಸನಿಲ್,ಅಧ್ಯಕ್ಷರಾದ ರಾಜೇಂದ್ರ ಬೊಂಡಾಲ ಉಪಸ್ಥಿತರಿದ್ದರು. 
ನಾಗೇಶ್ ಶೆಟ್ಟಿ ಬೊಂಡಾಲ ಸ್ವಾಗತಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *