ಬಂಟ್ವಾಳ: ‘ವ್ಯಾಲೆಂಟೈನ್ ಡೇ’ ಆಚರಣೆಯ ಹೆಸರಿನಲ್ಲಿ ಯುವತಿಯರ,ವಿದ್ಯಾರ್ಥಿನಿಯರ ಮೇಲಿನ ಕಿರುಕುಳ ಹಾಗೂ ಹಿಂಸಾತ್ಮಕ ಘಟನೆಗಳು ಹೆಚ್ಚಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಹರ್ಷೇಂದ್ರ ಶೆಟ್ಟಿ ಅವರ ಮೂಲಕ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಅದೇರೀತಿ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಂ.ಡಿ. ಮಂಚಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಚಂದ್ರ ಅವರನ್ನು ಭೇಟಿಯಾಗಿ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.
ಫೆ. 14ರ ವ್ಯಾಲೆಂಟೈನ್ ಡೇ ವೇಳೆ ‘ಪಾರ್ಟಿಗಳಲ್ಲಿ’ ಯುವಕ-ಯುವತಿಯರು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆಗೈದು ಅಸಭ್ಯವಾಗಿ ವರ್ತಿಸುವುದು ಬೆಳಕಿಗೆ ಬಂದಿದೆ.

ಅದೇರೀತಿ ಯುವತಿಯರನ್ನು ಸೆಳೆಯಲು ಅತಿ ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆಯಲ್ಲದೆ ಸುಳ್ಳು ಹೆಸರು ಹೇಳಿ ಯುವತಿಯರಿಗೆ ಮೋಸ ಮಾಡಿ ‘ಲವ್ ಜಿಹಾದ್’ ಮೂಲಕ ಅವರ ಬದುಕನ್ನು ಕೆಡಿಸಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಶಾಲಾ ಕಾಲೇಜು ಅವರಣ ಮಾತ್ರವಲ್ಲ ವಿಶೇಷ ಪೊಲೀಸ್ ಬಂದೋಬಸ್ತು ನಿಯೋಜಿಸಬೇಕು. ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗುವವರ ಮೇಲೆ ನಿಗಾ ಇಡಬೇಕು, ಅತಿವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಲ್ಲದೆ ಆಪತ್ತಿನ ಸಂದರ್ಭಗಳಲ್ಲಿ ಯುವತಿಯರಿಗೆ ಸಹಾಯ ಮಾಡಲು ವಿಶೇಷ ಹೆಲ್ಪ್ಲೈನ್ ನಂಬರನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ
ಈ ನಿಯೋಗದಲ್ಲಿ ಪ್ರೊಫೆಸರ್ ಗಿರೀಶ್ ಹೆಗ್ಡೆ, ಉದ್ಯಮಿಗಳಾದ ಸೋಮನಾಥ್ ಸಾಲ್ಯಾನ್ ಮತ್ತು ಸುರೇಶ್ ರೈ, ವಿಶ್ವ ಹಿಂದೂ ಪರಿಷತ್ತಿನ ಬಂಟ್ವಾಳ ಪ್ರಖಂಡ ಉಪಾಧ್ಯಕ್ಷರಾದ ಕೇಶವ ದೈಫಲ , ಹಿಂದೂ ಜನಜಾಗೃತಿ ಸಮಿತಿಯ ನಾರಾಯಣ ಬಂಟ್ವಾಳ ಅವರು ಉಪಸ್ಥಿತರಿದ್ದರು.
ಈ ನಿಯೋಗದಲ್ಲಿ ಪ್ರೊಫೆಸರ್ ಗಿರೀಶ್ ಹೆಗ್ಡೆ, ಉದ್ಯಮಿಗಳಾದ ಸೋಮನಾಥ್ ಸಾಲ್ಯಾನ್ ಮತ್ತು ಸುರೇಶ್ ರೈ, ವಿಶ್ವ ಹಿಂದೂ ಪರಿಷತ್ತಿನ ಬಂಟ್ವಾಳ ಪ್ರಖಂಡ ಉಪಾಧ್ಯಕ್ಷರಾದ ಕೇಶವ ದೈಫಲ , ಹಿಂದೂ ಜನಜಾಗೃತಿ ಸಮಿತಿಯ ನಾರಾಯಣ ಬಂಟ್ವಾಳ ಅವರು ಉಪಸ್ಥಿತರಿದ್ದರು.
