ಬಂಟ್ವಾಳ:  ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ಕುಲಾಲ ಸೇವಾದಳ ಮತ್ತು ಮಹಿಳಾ ಘಟಕದ ಸಹಕಾರದೊಂದಿಗೆ ಬಂಟ್ವಾಳ ಎಸ್‌ವಿಎಸ್ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಕೊಡಗು ಜಿಲ್ಲೆಯ ಆಯ್ದ ೩೬ ತಂಡಗಳ  ‘ಕುಲಾಲ್ಸ್ ಟ್ರೋಫಿ – ೨೦೨೬’ ನ್ನು ಅಮ್ಟಾಡಿ ಪಚ್ಚು ಫ್ರೆಂಡ್ಸ್ ತಂಡ ಪಡೆದುಕೊಂಡಿದೆ.ಕುಲಾಲ್ ಫ್ರೆಂಡ್ಸ್ ಕದ್ರಿ ತಂಡ  ರನ್ನರ್ಸ್ ಬಹುಮಾನ ಪಡೆದಿದ್ದಾರೆ.

ಬೆಸ್ಟ್ ಬ್ಯಾಟ್ಸ್‌ಮೆನ್ ಕಿರಣ್, ಮ್ಯಾನ್  ಆಫ್‌ದ ಮ್ಯಾಚ್ ಮತ್ತು ಮ್ಯಾನ್‌ಆಪ್ ಸೀರಿಸ್ ಶ್ರವಣ್, ಬೆಸ್ಟ್ ಬೌಲರ್ ಸೂರಜ್, ಬೆಷ್ಟ್ ಫೀಲ್ಡರ್ ತೇಜಸ್, ಉತ್ತಮ ಸಂಘಟನಾ ತಂಡ ಕೊಡಗು ಕುಲಾಲ್ ಯೂತ್ ರಾಕರ್‍ಸ್ ಪಡೆದುಕೊಂಡಿದೆ. ಸಚಿನ್, ನಿತಿನ್, ಶ್ರೀಕಾಂತ್, ಸದಾನಂದ ಅವರು ಅಂಪಾಯರ್ ಗಳಾಗಿ ಕಾರ್ಯ ನಿರ್ವಹಿಸಿದ್ದರು‌.
ಸಮಾರೋಪ ಸಮಾರಂಭದಲ್ಲಿ ಮುಂಬಯಿ ಹೊಟೇಲ್ ಉದ್ಯಮಿ ದಿನಕರ ಬಂಜನ್ ವಿಜೇತರಿಗೆ ಬಹುಮಾನ ವಿತರಿಸಿದರು. ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ. ರಮೇಶ್ ಸಾಲ್ಯಾನ್ ಸಂಚಯಗಿರಿ ವಹಿಸಿದ್ದರು.
ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಸಿ. ಪೆರ್ನೆ, ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಗಿರಿಧರ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಅಗ್ರಬೈಲು ಸ್ವಾಗತಿಸಿದರು. ಜಯಂತ್ ಅಗ್ರಬೈಲು ಕಾರ್ಯಕ್ರಮ ನಿರೂಪಿಸಿದರು.
ಸಂಘದ ಉಪಾಧ್ಯಕ್ಷೆ ಜಲಜಾಕ್ಷಿ, ಸಮಿತಿ ಸದಸ್ಯರುಗಳಾದ ಮಚ್ಚೇಂದ್ರ ಸಾಲ್ಯಾನ್, ತಾರನಾಥ ಮೊಡಂಕಾಪು, ದೇವದಾಸ ಅಗ್ರಬೈಲು, ಜಯಂತ ವಗ್ಗ, ಗಣೇಶ್ ಬೆದ್ರಗುಡ್ಡೆ, ಯೋಗೀಶ ಮಿತ್ತಬೈಲು, ಸುರೇಶ್ ಕುಲಾಲ್, ಪ್ರೇಮ ಪೊಸಳ್ಳಿ, ಮೀನಾಕ್ಷಿ ಪದ್ಮನಾಭ, ರಾಘವೇಂದ್ರ ಕಾಮಾಜೆ, ಪ್ರೇಮನಾಥ ನೇರಂಬೋಳು, ರಮೇಶ್ ಸಾಲ್ಯಾನ್ ಕೈಕುಂಜೆ ಮಹಿಳಾ ಘಟಕದ ಸದಸ್ಯರು ಮತ್ತು ಸೇವಾದಳದ ಸದಸ್ಯ ದರ್ಶನ್ ಮೊಡಂಕಾಪು ಕ್ರೀಡಾಕೂಟಕ್ಕೆ ಸಹಕರಿಸಿದ್ದರು.

By suddi9

Leave a Reply

Your email address will not be published. Required fields are marked *