ಬಂಟ್ವಾಳ:   ಮಹಿಳಾ ಸಬಲೀಕರಣ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇರ್ವತ್ತೂರು ಪದವು ಬಂಟ್ವಾಳ ತಾಲೂಕು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ). ಮಂಗಳೂರು. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಸಹಯೋಗದೊಂದಿಗೆ ಒಂದನೇ ಹಂತದ ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭ ಇರ್ವತ್ತೂರು ಗ್ರಾಮ ಪಂಚಾಯತ್ ಅಟಲ್ ಜೀ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.ಕಾರ್ಯಕ್ರದಲ್ಲಿ ಟೈಲರಿಂಗ್ ಫಲಾನುಭವಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಗೌರವಿಸಲಾಯಿತು. 
ಈ ಸಂಧರ್ಭದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್, ಭಾರತೀಯ ವಿಕಾಸ ಟ್ರಸ್ಟಿನ ಸಂಯೋಜಕರಾದ ಜೀವನ್ ಕೊಲ್ಯ. ತಾಲೂಕು ವ್ಯವಸ್ಥಾಪಕರಾದ ಪ್ರದೀಪ್ ಕಾಮತ್, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಸಿಬ್ಬಂದಿಯಾದ  ಪಂಡರಿನಾಥ, ಇರ್ವತ್ತೂರು ಪಂಚಾಯತ್ ಅಧ್ಯಕ್ಷೆಯಾದ ಮಾಲತಿ, ಸದಸ್ಯರಾದ ಸುಧೀರ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷೆಯಾದ ಮಾಲತಿ. ಎಂ. ನಾಯಕ್, ಒಕ್ಕೂಟದ ಮಾಜಿ ಅಧ್ಯಕ್ಷೆಯಾದ ಗುಲಾಬಿ ಹೆಗ್ಡೆ, ಟೈಲರಿಂಗ್ ತರಬೇತಿಯ ಟೀಚರ್ ಪವಿತ್ರ, ಒಕ್ಕೂಟದ ಎಂ.ಬಿ.ಕೆ ಶಾರದ ಶ್ರೀನಿವಾಸ್ ಪಂಚಾಯತ್ ಸಿಬ್ಬಂದಿಗಳಾದ ಒಕ್ಕೂಟದ ಎಲ್. ಸಿ. ಆರ್, ಪಂಚಾಯತ್ ಕಾರ್ಯದರ್ಶಿ, ಕೃಷಿಸಖಿ, ಪಶುಸಖಿ, ಗ್ರಂಥಾಲಯ ಪ್ರೇರಕಿ, ಟೈಲರಿಂಗ್ ಫಲಾನುಭವಿಗಳು, ವಿಕಲಚೇತನರ ಪ್ರೇರಕರು ಮುಂತಾದವರು ಉಪಸ್ಥಿತರಿದ್ದರು.  ಎಲ್ಲರನ್ನು ಸುನೀತಾ ಸ್ವಾಗತಿಸಿ ದರು, ಉಷಾರವರು ಧನ್ಯವಾದ ಗೈದರು. ಮಂಜುಳಾರವರು ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ
 ಅಬುಸಾ ಜಲೀಲ್ ರವರು ಕವನ ವಾಚಿಸಿದರು.   

By suddi9

Leave a Reply

Your email address will not be published. Required fields are marked *