ಬಂಟ್ವಾಳ:2025 ಡಿಸೆಂಬರ್ನಲ್ಲಿ ನಡೆದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಬಂಟ್ವಾಳ ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶೇ.100 ಫಲಿತಾಂಶ ಬಂದಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿಗಳಾದ ಸ್ಪಂದನ.ಜೆ.ಶೆಟ್ಟಿ ೪೯೨, ವೈಷ್ಣವಿ.ಎಸ್.ಭಟ್ ೪೭೭, ರಿಧಾ ನಫೀಸ ಹಲ್ಯರ್ ೪೭೫, ವಿದಿಶ.ಸಿ.ಕೆ ೪೬೭, ಜೋಶಲ್ ಡಿ’ಸೋಜ ೪೫೭, ಶಿವಾನಿ ೪೫೬, ದೇವಾನ್ಶ್ ೪೫೪, ಪ್ರಣವಿ.ಪಿ ಸುವರ್ಣ ೪೫೪, ಮನ್ವಿತ್ ಕುಮಾರ್.ಎಸ್. ೪೫೦, ಸುಸಾನ್ ಸಾರ್ವ.ವಿ. ೪೪೩ ಅಂಕಗಳೊಂದಿಗೆ ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಶಾಲಾ ಸಂಚಾಲಕರಾದ ಕೆ ರೇಖಾ ಶೆಣೈ, ಮುಖ್ಯ ಶಿಕ್ಷಕರಾದ ಹರಿಪ್ರಸಾದ್, ಚೈತ್ರಾ ಶೆಟ್ಟಿ ಹಾಗೂ ವೀಣಾ ದೇವಾಡಿಗ ಅವರು ಅಭಿನಂದಿಸಿದ್ದಾರೆ. ಚಿತ್ರಕಲಾ ಶಿಕ್ಷಕರಾದ ರಾಜೇಂದ್ರ ನಾಯಕ್ ಮಾರ್ಗದರ್ಶನ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
