ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಹಂಡೇಲು ಎಂಬಲ್ಲಿ ಮಂಗಳವಾರ ಮುಂಜಾನೆ ಪಿಕ್ಅಪ್ ವಾಹನ ರಸ್ತೆ ಬದಿಯ ಮನೆಯ ಅಂಗಳಕ್ಕೆ ಪಲ್ಟಿಯಾಗಿದೆ.
ಮಂಗಳೂರು ನೀರುಮಾರ್ಗದ ಓಶಿಯನ್ ಡಿಜೆ ಸೌಂಡ್ಸ್ನ ಪಿಕ್ಅಪ್ ವಾಹನ ಮಂಗಳವಾರ ಮುಂಜಾನೆ ಕಾರ್ಕಳ ಸಮೀಪದ ಬಜಗೊಳಿಯಲ್ಲಿ ಕಾರ್ಯಕ್ರಮ ಮುಗಿಸಿ, ಮಂಗಳೂರಿಗೆ ಹಿಂದುರುತ್ತಿದ್ದರು.

handel acc (1)

handel acc (2)

handel acc (3)


ವಾಹನದ ಹಿಂದೆ ಸೌಂಡ್ಸ್ಗೆ ಬೇಕಾದ ಜನರೇಟರನ್ನು ಕಟ್ಟಲಾಗಿತ್ತು. ಸುಮಾರು 5 ಗಂಟೆಯ ವೇಳೆಗೆ ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯ ಹಂಡೇಲು ಬಳಿ ಸಾಗುತ್ತಿದ್ದಾಗ, ಜನರೇಟರ್ನ ಪಿಕ್ಅಪ್ನ ಎಡಬದಿಗೆ ವಾಲತೊಡಗಿದ್ದು, ಈ ವೇಳೆ ಚಾಲಕ ಲಾರೆನ್ಸ್ ಡಿ’ಸೋಜಾ ಅವರ ನಿಯಂತ್ರಣ ತಪ್ಪಿ ಪಿಕ್ಅಪ್ ವಾಹನ ಮನೆಯ ಅಂಗಳಕ್ಕೆ ಪಲ್ಟಿಯಾಗಿದೆ. ಪಿಕ್ ಅಪ್ ಹಿಂಬದಿಯಿದ್ದ ಸುಳ್ಯ ಮೂಲದ ತೇಜ್ ಎಂಬವರಿಗೆ ಗಾಯವಾಗಿದೆ. ಮನೆಯ ವಾರಂಡ, ಮುಂಬಾಗದ ಹೆಂಚು ಪುಡಿಯಾಗಿದೆ. ಅಂಗಳದಲ್ಲಿ ಮುಂಜಾನೆ ಯಾರೂ ಇಲ್ಲದ ಕಾರಣ ಭಾರಿ ಅನಾಹುತವೊಂದು ತಪ್ಪಿದೆ.

By suddi9

Leave a Reply

Your email address will not be published. Required fields are marked *