ಬಂಟ್ವಾಳ: ಸೌಂಡ್ಸ್ ಮತ್ತು ಲೈಟಿಂಗ್ ಅಂಗಡಿ ಮಾಲಕರೋರ್ವರು ತನ್ನ ಮೊಬೈಲ್ ಮನೆಯಲ್ಲೇ ಬಿಟ್ಟು ನಿಗೂಢವಾಗಿ ಕಾಣೆಯಾದ ಘಟನೆ ಸಜೀಪ ಮೂಡ ಗ್ರಾಮದಲ್ಲಿ ನಡೆದಿದೆ.ಸಜೀಪ ಮೂಡ ಗ್ರಾಮದ ಕಂದೂರು ನಿವಾಸಿ ಸದಾನಂದ ( 50) ನಾಪತ್ತೆಯಾದವರಾಗಿದ್ದಾರೆ.

ಸಜೀಪದ ಕಂದೂರಿನಲ್ಲಿ ಎಸ್.ಕೆ.ಸುವರ್ಣ ಸೌಂಡ್ಸ್ ಮತ್ತು ಲೈಟಿಂಗ್ ಅಂಗಡಿಯನ್ನು ಹೊಂದಿರುವ ಇವರು ಸೆ. 16 ರಂದು ಸಂಜೆ 4.30 ರ ವೇಳೆ ತನ್ನ ಮೊಬೈಲನ್ನು ಮನೆಯ ಬಳಿ ಟೆಂಪೋದಲ್ಲಿರಿಸಿ ಬಳಿಕ ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ರೋಹಿಣಿ ಅವರು ನಗರ ಪೋಲಿಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಿಂದಿ ,ಕನ್ನಡ ಮತ್ತು ತುಳು ಭಾಷೆ ಬಲ್ಲವರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
