ಗುರುಪುರ : ಪೆರಾರ-ಗಂಜಿಮಠದ ಬಿಲ್ಲವ ಸಮಾಜ ಸೇವಾ ಸಂಘ(ರಿ) ಇದರ ವತಿಯಿಂದ ಸೆ. ೧೪ರಂದು ಮೂಡುಪೆರಾರ ಗ್ರಾಮದ ಕಾಯರಣೆಗೆ ಹತ್ತಿರದ ಆದಿಮಾಯೆ ಕಂಪೌಂಡ್ ಸ್ಥಾಪಿಸಲಾದ ಸಂಘದ ನೂತನ ತಾತ್ಕಾಲಿಕ ಕಚೇರಿ ಉದ್ಘಾಟಿಸಿದ ಬಳಿಕ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ೧೭೧ನೇ ಜನ್ಮದಿನ ಆಚರಿಸಲಾಯಿತು.

ಬೆಳಿಗ್ಗೆ ಕಾಯರಣೆ ಆದಿಮಾಯೆಯ ಬಾಲ ಸಂಸ್ಕಾರ ಕೇಂದ್ರದ ಸದಸ್ಯರಿಂದ ಭಜನೆ ನಡೆದ ಬಳಿಕ ಕುದ್ರೋಳಿಯ ಅಶೋಕ್ ಶಾಂತಿ ಪೌರೋಹಿತ್ಯದಲ್ಲಿ ಗಣಹೋಮ ಹಾಗೂ ಮಹಾಪೂಜೆ ನಡೆಂಯಿತು.
ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ ಅಳಿಕೆ, ಗೌರವಾಧ್ಯಕ್ಷರಾದ ಕೃಷ್ಣ ಅಮೀನ್ ಪೆರಾರ, ಮೋನಪ್ಪ ಪೂಜಾರಿ ತನ್ಯ, ಕಿಶೋರ್ ಕಬೆತ್ತಿಗುತ್ತು, ಕಾರ್ಯದರ್ಶಿ ಸುನಿಲ್ ಗಂಜಿಮಠ, ಜೊತೆ ಕಾರ್ಯದರ್ಶಿ ರಾಜೇಶ್ ಮಜಲು, ಉಪಾಧ್ಯಕ್ಷರಾದ ಸುದೇಶ್ ಕುಮಾರ್, ಪದ್ಮನಾಭ ಪೂಜಾರಿ ನೀರಳಿಕೆ, ವೆಂಕಪ್ಪ ಜತ್ತಿಬೆಟ್ಟು, ಕೋಶಾಧಿಕಾರಿ ಈಶ್ವರ ಪೂಜಾರಿ ಮೂಡುಪೆರಾರ, ಸಲಹೆಗಾರರಾದ ಸದಾಶಿವ ಪೂಜಾರಿ ಮಜಲು, ಗೋಪಾಲ ಪೂಜಾರಿ ಮೂಡುಪೆರಾರ, ಪದಾಧಿಕಾರಿಗಳಾದ ನವೀನ್ ಅಳಿಕೆ, ನವೀನ್ ಪೆರಾರ, ಪುಷ್ಪಾ ಕರ್ಕೇರ ಗಂಜಿಮಠ, ಪ್ರಶಾಂತ್ ಪೂಜಾರಿ ಅಳಿಕೆ, ಚಂದ್ರಹಾಸ ಕೊಳಪಿಲ, ಸುಧಾಕರ ಅರಿಕೆಪದವು, ಸಂತೋಷ್ ಮೂಡುಪೆರಾರ, ಸಂಘಟನಾ ಕಾರ್ಯದರ್ಶಿ ಉದ್ಯಮಿ ಕಿರಣ್ ಸಾಲ್ಯಾನ್, ಮಳಲಿ ಬಿಲ್ಲವ ಸಂಘದ ಅಧ್ಯಕ್ಷ ಕೇಶವ ಪೂಜಾರಿ, ಬಜ್ಪೆ ನಾರಾಯಣ ಗುರು ಮಂದಿರ ಅಧ್ಯಕ್ಷ ಶಿವರಾಮ ಪೂಜಾರಿ, ಮೂಡುಪೆರಾರ ಗ್ರಾಪಂ ಉಪಾಧ್ಯಕ್ಷ ಜಯಂತ್ ಪೂಜಾರಿ, ಮಾಜಿ ಅಧ್ಯಕ್ಷ ಪದ್ಮನಾಭ ಪೂಜಾರಿ, ಗಂಜಿಮಠ ಗ್ರಾಪಂ ಮಾಜಿ ಅಧ್ಯಕ್ಷೆ ರೇಣುಕಾ ವಿ, ಉದ್ಯಮಿ ರಮೇಶ್ ಮತ್ತಿತರರು ಇದ್ದರು. ನವೀನ್ ಪೆರಾರ ಅವರು ಕಾರ್ಯಕ್ರಮ ನಿರೂಪಿಸಿದರು.
