ಮುಂಬಯಿ: ಮಹಾರಾಷ್ಟ್ರ ರಾಜ್ಯದ ಪ್ರಸಿದ್ಧ ಯಾತ್ರಾ ಹಾಗೂ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ನಾಸಿಕ್ನ ಗೋದಾವರಿ ನದಿ ತೀರದ ಪಂಚವಟಿಯಲ್ಲಿ ಉಡುಪಿ ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಶ್ರೀ ಪೇಜಾವರ ಅಧೋಕ್ಷಜ ಮಠದ ಶಾಖೆಯಲ್ಲಿ ಇಂದಿಲ್ಲಿ ಸೋಮವಾರ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಆದೇಶ ಮತ್ತು ಆಶೀರ್ವಾದಗಳೊಂದಿಗೆ ಶ್ರೀರಾಘವೇಂದ್ರ ಗುರುಗಳ 354ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕೃಷ್ಣೈಕ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರನ್ನು ಸ್ಮರಣೆಯೊಂದಿಗೆ ಶ್ರೀರಾಘವೇಂದ್ರ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ನಡೆಸಲಾಗಿದ್ದು ಪುರೋಹಿತ ವಿಷ್ಣುತೀರ್ಥ ಸಾಲಿ ಅವರು ವಿಶೇಷವಾಗಿ ಸಿಂಗರಿಸಿದ ಮಂಟಪದಲ್ಲಿ ಶ್ರೀರಾಘವೇಂದ್ರ ಗುರುವರ್ಯರನ್ನು ಅಲಂಕರಿಸಿದ್ದು ಅದಿತಿ ದೇಶಪಾಂಡೆ ಜೊತೆಗೂಡಿ ಪೂಜಾಧಿಗಳನ್ನು ನೆರವೇರಿಸಿ ಉಪಸ್ಥಿತ ಸದ್ಭಕ್ತರಿಗೆ ಹರಸಿದರು.

ಈ ಸಂದರ್ಭದಲ್ಲಿ ನಾಸಿಕ್ ಪೇಜಾವರ ಮಠದ ವ್ಯವಸ್ಥಾಪಕ ಶ್ರೀನಿವಾಸ್ ದೇಶಪಾಂಡೆ ಮತ್ತು ಅನಿಲ್ ಆಚಾರ್ ಹಾಗೂ ಮಠದ ಬಲರಾಮ ಪಾಂಡೆ, ಸಹಾಯಕ ಲಕ್ಷ ಣ ದುಬೆ ಸೇರಿದಂತೆ ಗುರು ಭಕ್ತರು ಹಾಜರಿದ್ದರು.
2010ನೇ ಜುಲೈ, 04ರಂದು ನಾಸಿಕ್ನ ಗೋದಾವರಿ ತಟದಲ್ಲಿ ತಪೋವನದಲ್ಲಿ ಪೇಜಾವರ ಮಠದ ಶಾಖೆಯಾಗಿಸಿ ಪಂಚವಟಿ ಸೀತರಾಮ ಪ್ರತಿಷ್ಠಾನದ ವೈಕುಂಠ್ ಧಾಮ್ ಮತ್ತು ಸಾಮಾಜಿಕ ಸಂಸ್ಕೃತಿ ಸಂಕೀರ್ಣವನ್ನು ಶ್ರೀ 108 ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಲೋಕಾರ್ಪಣೆ ಗೊಳಿಸಿದ್ದ್ದರು. ಇಲ್ಲಿ ನಿರ್ಮಾಣಗೊಂಡ ಈ ಕ್ಷೇತ್ರದಲ್ಲಿ ದಕ್ಷಿಣ ಭಾರತೀಯರ ಮತ್ತು ವಿಶೇಷವಾಗಿ ತುಳು-ಕನ್ನಡಿಗ ಭಕ್ತಾಧಿಗಳ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಹಿಂದೂ ಪದ್ಧತಿಯಲ್ಲಿ ಧಾರ್ಮಿಕ ವೈದಿಕ ಕೈಂಕರ್ಯ, ಕ್ರಿಯಾಧಿಗಳನ್ನು ಸಾಂಪ್ರಾದಾಯಿಕವಾಗಿ ನೆರವೇರಿಸಲು ಅನುಕೂಲಕರವಾದ ಮೂಲಭೂತ ಸೌಲಭ್ಯಗಳ (ಯಾಗ-ಯಜ್ಞಾದಿಗಳಿಗಾಗಿ ತೆರೆದ ಛಾವಣಿಯ) ಸ್ಥಳಾವಕಾಶ ಹಾಗೂ ಸುಸಜ್ಜಿತ ಮಹಡಿಗಳ ಸಭಾಗೃಹ, ಪರಿವಾರ ಸಹಿತ ಉಳಕೊಳ್ಳಲು ಅತ್ಯಾಧುನಿಕವಾದ ವಿಶ್ರಾಂತಿಗೃಹಗಳು, ಶುದ್ಧ ಹಾಗೂ ಬ್ರಾಹ್ಮಣರ ಶೈಲಿಯ ಅಶನ ವ್ಯವಸ್ಥೆ ಒದಗಿಸುವಲ್ಲಿ ಶ್ರೀ ವಿಶ್ವೇಶ ತೀರ್ಥರು ಮಹತ್ತರವಾದ ಪಾತ್ರವಹಿಸಿದ್ದರು ಎಂಬುವುದನ್ನು ಭಕ್ತರು ನೆನಪಿಸಿಕೊಂಡರು.
