ಮೂಡುಬಿದಿರೆ : ಮೂಡುಬಿದಿರೆಯ ದೀರ್ಘಕಾಲದ ಸಮಸ್ಯೆ ಒಳಚರಂಡಿ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 60ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಒಳಚರಂಡಿ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಮಾರ್ಪಾಡಿ ಗ್ರಾಮಗಳ ಪೈಕಿ ಉಳಿಯ, ನಾಗರ ಕಟ್ಟೆ, ಬೈಲಾರೆ, ಅಂಕಸಾಲೆ, ಪ್ರಾಂತ್ಯ ಗ್ರಾಮದ ಲಾಡಿ ಮುಂತಾದ ಕಡೆಗಳಲ್ಲಿ ಪ್ರದೇಶಗಳಿಗೆ ಭೇಟಿ ನೀಡಿ ಪೈಪ್ ಲೈನ್ ಹಾದು ಹೋಗುವ ಸ್ಥಳಗಳ ಪರಿಶೀಲನೆ ಮತ್ತು ಭೂಮಿ ಕಳೆದುಕೊಳ್ಳಲಿರುವ ಸಂತ್ರಸ್ತರಿಂದ ಸಹಾಯಕ ಕಮೀಷನರ್ ಡಾ. ಅಶೋಕ್ ಅವರು ಮಂಗಳವಾರ ಅಹವಾಲು ಸ್ವೀಕರಿಸಿದರು.

ಪ್ರಾಂತ್ಯ ಗ್ರಾಮದ ಲಾಡಿಯಲ್ಲಿ ಮತ್ತು ಬೈಲಾರೆಯಲ್ಲಿ ಪೈನ್ ಲೈನ್ ಹಾದು ಹೋಗುವಾಗ ಮನೆಗಳಿಗೆ ತೊಂದರೆ ಯಾಗುತ್ತದೆ ತಾವು ಮನೆಗಳನ್ನು ಪರಂಬೋಕು ತೋಡುಗಳಲ್ಲಿಯೇ ನಿರ್ಮಿಸಿದ್ದೀರಿ ಎಂದು ಡಾ ಅಶೋಕ್ ಅವರು ಸಂತ್ರಸ್ತರಿಗೆ ತಿಳಿಸಿದರು. ಯೋಜನೆಯನ್ನು ರೂಪಿಸುವ ಮುನ್ನ ಪುರಸಭೆಯ ಅಧಿಕಾರಿಗಳಾಗಲಿ, ಒಳಚರಂಡಿ ಮಂಡಳಿಯ ಅಧಿಕಾರಿಗಲಾಗಲಿ ನಮ್ಮನ್ನು ಭೇಟಿಯಾಗಿ ನಮ್ಮಿಂದ ಅಭಿಪ್ರಾಯ ಪಡೆದಿಲ್ಲ. ಕೆಲವೆಡೆ ನಕ್ಷೆಯಲ್ಲಿ ಬೇರೆ ಸ್ಥಳವನ್ನು ಗುರುತಿಸಿದ್ದರೆ ಮತ್ತೊಂದು ಸ್ಥಳಕ್ಕೆ ನೋಟಿಸು ನೀಡಲಾಗಿದೆ ಇದರಿಂದ ಭೂ ಮಾಲಿಕರಲ್ಲಿ ಗೊಂದಲ ಉಂಟಾಗಿದೆ ಎಂದು ನಾಗರಕಟ್ಟೆ ಬೈಲಾರೆಯ ಅಶೋಕ್ ಅಂಚನ್ ಎಸಿಯವರಲ್ಲಿ ದೂರಿದರು.
ನಮ್ಮ ಖಾಸಗಿ ಜಾಗದಲ್ಲಿ ತೋಡಿಗೆ ಜಾಗ ಬಿಟ್ಟುಕೊಟ್ಟಿದ್ದು ಸರಕಾರಿ ಸ್ಥಳದಲ್ಲಿದ್ದ ತೋಡಿನ ಜಾಗದಲ್ಲಿ ಮನೆ ನಿರ್ಮಿಸಿದ್ದೇವೆ ಈಗ ಮನೆ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಮನೆಯನ್ನು ಹೊರತುಪಡಿಸಿದ ಸ್ಥಳದಲ್ಲಿ ಪೈಪ್ ಅಳವಡಿಸುವಂತೆ ಬೈಲಾರೆಯ ಸುರೇಶ್ ಮನವಿ ಮಾಡಿದರು. ತನ್ನ ಮನೆಯ ಸಮೀಪ ತೋಡು ಹರಿಯುತ್ತಿದ್ದು ಅದರ ಪಕ್ಕದಲ್ಲಿರುವ ಮನೆಯ ಕಂಪೌಂಡ್ ಜಾಗವನ್ನು ಪೈಪ್ ಲೈನ್ಗೆ ಬಿಟ್ಟುಕೊಡಲು ಸಿದ್ಧನಿದ್ದೇನೆ ಮನೆಯನ್ನು ಉಳಿಸಿ ಎಂದು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಮೋಹನ್ದಾಸ್ ಪ್ರಭು ಮನವಿ ಮಾಡಿದರು.
ಪ್ರಾಂತ್ಯ ಗ್ರಾಮದ ಅಂಕಸಾಲೆಯ ಬಳಿ ಮೋಹಿನಿಯವರ ತೋಟದ ಸುತ್ತ ಪೈಪ್ ಲೈನ್ ಹಾದುಹೋಗುತ್ತಿದ್ದು ತೋಟಕ್ಕೆ ಹೊಂದಿಕೊಂಡಿರುವ ರಕ್ತೇಶ್ವರಿ ಗುಡಿ, ನಾಗಬನವನ್ನು ಉಳಿಸಿಕೊಡಿ. ಪಕ್ಕದ ಜಾಗಕ್ಕೆ ಸ್ಥಳಾಂತರಿಸಿ ಎಂದು ಮನವಿ ಮಾಡಿದರು. ನಮ್ಮ ಬಾವಿ, ತೋಟ ಉಳಿಸಿಕೊಡಿ ಎಂದು ಲಾಡಿಯ ಸತ್ಯವತಿ ಅಹವಾಲು ಸಲ್ಲಿಸಿದರೆ ಎರಡು ವರ್ಷದ ಹಿಂದೆ ನಿರ್ಮಿಸಿದ ಹೊಸ ಮಹಡಿ ಮನೆಯಲ್ಲಿ ಐದು ಕುಟುಂಬಗಳು ಒಟ್ಟಾಗಿ ವಾಸಿಸುತ್ತಿದ್ದೇವೆ ತೋಡಿಗೆ ಹೊಂದಿಕೊಂಡಿರುವ ಶೌಚಾಲಯ, ಜಾಗ ಬಿಟ್ಟುಕೊಡಲು ಸಿದ್ಧರಿದ್ದೇವೆ. ಮನೆ ಉಳಿಸಿ ಎಂದು ಲಾಡಿಯ ಸಲೀಂ ಬೇಡಿಕೆ ಸಲ್ಲಿಸಿದರು.
ಅಧಿಕಾರಿಗಳು, ಇಂಜಿನಿಯರ್ಗಳು ಸ್ಥಳ ಸರ್ವೆ ನಡೆಸದೆ, ಸಂತ್ರಸ್ತರ ಅಭಿಪ್ರಾಯ ಪಡೆಯದೆ ಕೇವಲ ಭೂ ನಕಾಶೆಯ ಆಧಾರದ ಮೇಲೆ ಯೋಜನೆಯನ್ನು ಸಿದ್ಧಪಡಿಸಿರುವುದರಿಂದ ಕೆಲವರಿಗೆ ತೊಂದರೆಯಾಗಿದೆ. ಆದರೆ ಭೂ ಸ್ವಾದೀನ ಪ್ರಕ್ರಿಯೆಯ ಹಂತದಲ್ಲಿರುವುದರಿಂದ ಯೋಜನೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಮನೆಗಳು, ಬಾವಿ, ಕೃಷಿ ತೋಟಗಳಿಗೆ ತೊಂದರೆಯಾಗದಂತೆ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಒಳಚರಂಡಿ ಮಂಡಳಿಯ ಇಂಜಿನಿಯರ್ರೊಂದಿಗೆ ಈ ಕುರಿತು ಚಚರ್ಿಸಲಾಗುವುದು. ಮತ್ತು ಒಳಚರಂಡಿ ಮಂಡಳಿಯ ಇಂಜಿನಿಯರ್ಗಳು ಪುರಸಭೆಯ ಅಧಿಕಾರಿಗಳ ಸಹಿತ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ಸಂತ್ರಸ್ಥರ ಅಹವಾಲು ಪಡೆದು ಭೂ ಸ್ವಾಧೀನ ಪ್ರಕ್ರಿಯೆ ನಡೆಸಲಾಗುವುದು. ಸಂತ್ರಸ್ತರ ಹಿತಾಸಕ್ತಿಯನ್ನು ಪರಿಗಣಿಸುವುದಾಗಿ ಸಹಾಯಕ ಕಮೀಷನರ್ ಭರವಸೆ ನೀಡಿದರು.
ತಹಸೀಲ್ದಾರ್ ಮಹಮ್ಮದ್ ಇಸಾಕ್, ಪುರಸಭೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
