ಮೂಡುಬಿದಿರೆ : ಮೂಡುಬಿದಿರೆಯಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಭವನದಲ್ಲಿ ಬುಧವಾರ ನಡೆದ  ಸಭೆಯಲ್ಲಿ ಪುರಸಭೆಯ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ ವ್ಯಾಪಾರಿಗಳ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಗೆ  ಅವಕಾಶ ಕಲ್ಪಿಸುವ ಚಿಂತನೆಯನ್ನು ಪುರಸಭೆಯು ಕೈಗೊಂಡಿದೆ.

11mdb1

ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಈ ತಿಂಗಳ ಎರಡನೇ ಬಾರಿಗೆ ಪುರಸಭೆಯು ಕರೆದ  ಸಭೆಯಲ್ಲಿ ಬಸ್ ಮಾಲಕರು ಮತ್ತು ಸಮಿತಿಯ ಸದಸ್ಯರಾದ ಪುರಸಭಾ ಸದಸ್ಯರುಗಳು ಈ ಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಿದರು. ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ವಾಹನಗಳನ್ನು ಪಾರ್ಕ್ ಮಾಡಲು ಜಾಗದ ಕೊರತೆ ಇದೆ ಅಲ್ಲದೆ  ಬಸ್ ನಿಲ್ದಾಣದಲ್ಲಿಯೇ ಕೆಲವು ಗಂಟೆಗಳ ಕಾಲ ಪಾರ್ಕಿಂಗ್  ಮಾಡುತ್ತಿವೆ, ಅಲ್ಲದೆ ಬೇರೆ ಬೇರೆ ಕಡೆಗಳಿಂದ ಬರುವ ಜನರು ಕೂಡಾ ತಮ್ಮ ಖಾಸಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ತೊಂದರೆಯಾಗುತ್ತಿರುವುದರಿಂದ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿರುವ ವ್ಯಾಪಾರಿಗಳಿಗೆ ಮಾತ್ರ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲು ಅವಕಾಶ ನೀಡುವಂತೆ ಸಾರಿಗೆ ಉದ್ಯಮಿ ನಾರಾಯಣ.ಪಿ.ಎಂ ಸಲಹೆ ನೀಡಿದರು.

ಬಸ್ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ನಿಲ್ದಾಣದೊಳಗೆ ಪೇ ಪಾರ್ಕಿಂಗ್ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಸಾರಿಗೆ ಉದ್ಯಮಿ ನಾರಾಯಣ ಪಿಎಂ ಅವರ ಸಲಹೆಯನ್ನು ಸಭೆ ಅಂಗೀಕರಿಸಿತು. ಇಂದಿರಾಗಾಂಧಿ ಸಂಕೀರ್ಣದಲ್ಲಿರುವ ಕೆಲವು ವ್ಯಾಪಾರಿಗಳಿಗೆ ನಾಲ್ಕುಚಕ್ರದ ವಾಹನಗಳಿವೆ ಅವರಿಗೆ ಸಂಕೀರ್ಣದ ಬಲಬದಿಯ ಕೊನೆಯ ಜಾಗವನ್ನು  ಅವಕಾಶ ಕೊಡಬೇಕು ಎಂದು ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ ಸಹಿತ ಮತ್ತಿತರರ ಸಲಹೆ ಬಗ್ಗೆ ಸಹಮತದ ತೀಮರ್ಾನವನ್ನು ತೆಗೆದುಕೊಳ್ಳಲು ಸಾಧ್ಯವಾಗದ ಹಿನ್ನಲೆಯಲ್ಲಿ ಮುಂದಿನ ಸಭೆಗೆ ಮುಂದೂಡಲಾಯಿತು.

 

By suddi9

Leave a Reply

Your email address will not be published. Required fields are marked *