ಮೂಡುಬಿದಿರೆ : ಪಡುಮಾನರ್ಾಡು ಗ್ರಾಮ ಪಂಚಾಯತ್ಗೆ ಒಳಪಟ್ಟಿರುವ ಪಡುಮಾನರ್ಾಡು ಮತ್ತು ಮೂಡುಮಾನರ್ಾಡು ಗ್ರಾಮಗಳಲ್ಲಿ ರುಧ್ರಭೂಮಿಗಳಿಲ್ಲ. ಈ ಬಗ್ಗೆ ಹಲವು ಬಾರಿ ಅಹವಾಲು ಸಲ್ಲಿಸಿದ್ದರೂ ಈ ವರೆಗೂ ರುದ್ರಭೂಮಿ ನಿಮರ್ಿಸಿಲ್ಲ. ಅಚ್ಚರಕಟ್ಟೆ ಪ್ರದೇಶದ ಎರಡು ಕಡೆಗಳಲ್ಲಿ ರುದ್ರಭೂಮಿಗೆ ಸ್ಥಳ ಕಾಯ್ದಿರಿಸಿದ್ದು ಆ ಜಾಗವನ್ನು ಗುರುತಿಸಿ ಹೆಣ ಸುಡಲು ಅವಕಾಶ ಕಲ್ಪಿಸಬೇಕೆಂದು ಗ್ರಾಮಸ್ಥರ ಪರವಾಗಿ ರವಿ ಮೂಲ್ಯ ಕಂದಾಯ ಅಧಿಕಾರಿಗಳನ್ನು ಒತ್ತಾಯಿಸಿದರು.
ಪಡುಮಾನರ್ಾಡು ಗ್ರಾಮಪಂಚಾಯತ್ ಸಭಾಭವನದಲ್ಲಿ ಮಂಗಳವಾರ ನಡೆದ ಪಡುಮಾನರ್ಾಡು, ಮೂಡುಮನರ್ಾಡು ಗ್ರಾಮಪಂಚಾಯತ್ಗಳ ಕಂದಾಯ/ಪಿಂಚಣಿ ಅದಾಲತ್ನಲ್ಲಿ ಈ ಬೇಡಿಕೆ ಸಲ್ಲಿಸಿದರು.


ರುದ್ರಭೂಮಿಗೆಂದು ಕಾಯ್ದಿರಿಸುವ ಜಾಗವು ಡೀಮ್ಡ್ ಫಾರೆಸ್ಟ್ ವ್ಯಾಪಿಗೆ ಒಳಪಟ್ಟಿರುವುದರಿಂದ ರುಧ್ರಭೂಮಿ ಜಾಗಕ್ಕೆ ತೊಂದರೆಯಾಗಿತ್ತು ಇದೀಗ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ತೆರವುಗೊಳಿಸಲು ಸರಕಾರದಿಂದ ಸುತ್ತೋಲೆ ಬಂದಿದ್ದು ಒಂದು ತಿಂಗಳೊಳಗೆ ಇದು ತೆರವುಗೊಳ್ಳಲಿದೆ ಅಲ್ಲದೆ ಸ್ಮಶಾನಕ್ಕೆ ಕಾಯ್ದಿಟ್ಟ ಪರಿಸರದಲ್ಲಿ ಮನೆಗಳಿದ್ದರೆ ಅದನ್ನು ಮನೆ ನಿವೇಶನಕ್ಕಾಗಿ ಕಾಯ್ದಿರಿಸಿ ಜನವಸತಿ ಇಲ್ಲದ ಪ್ರದೇಶದಲ್ಲಿ ರುದ್ರಭೂಮಿಗೆ ಸ್ಥಳ ಕಾಯ್ದಿರಿಸುವಂತೆ ಮತ್ತು ಸಂಬಂಧಿತ ಸ್ಥಳಕ್ಕೆ ಬೋಡರ್್ ಅಳವಡಿಸುವ ಮೂಲಕ ಒತ್ತುವರಿಗೆ ಅವಕಾಶ ಕಲ್ಪಿಸದಂತೆ ಗ್ರಾಮಕರಣಿಕರಿಗೆ ತಹಶೀಲ್ದಾರ್ ಮಹಮ್ಮದ್ ಇಸಾಕ್ ಸೂಚಿಸಿದರು. ಸಕರ್ಾರಿ ಸ್ಥಳವಾಗಿದ್ದು ಡೀಮ್ಡ್ ಪ್ರದೇಶವೆಂದು ಗುರುತಿಸಲ್ಪಟ್ಟಿದ್ದರೆ ಅದನ್ನು ಈಗಲೇ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು. ಹಾಗೂ ಊರಿನ ಅಗತ್ಯವಾದ ಘನತ್ಯಾಜ್ಯ ವಿಲೇವಾರಿ, ಆಸ್ಪತ್ರೆ ಅಥವಾ ಸಾರ್ವಜನಿಕ ಉದ್ದೇಶದ ಚಟುವಟಿಕೆಗಳಿಗೆ ಅದನ್ನು ಮೀಸಲಿರಿಸುವಂತೆ ಗ್ರಾಮಕರಣಿಕರಿಗೆ ಸಲಹೆ ನೀಡಿದರು.
ತಾನು ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ದುಡಿಯಲಾರದಂತಾಗಿದ್ದೇನೆ ತನಗೆ ಬಿಪಿಎಲ್ ಕಾಡರ್ುದಾರಿಗೆ ನೀಡುವ ಸೌಲಭ್ಯವನ್ನು ಒದಗಿಸಬೇಕು ಎಂದು ಗುಂಡುಕಲ್ಲಿನ ಅಬ್ದುಲ್ ಖಾದರ್ ಮನವಿ ಮಾಡಿದರು. ಇದಕ್ಕೆ ಕಾನೂನಿನಲ್ಲಿ ಅವಕಾಶವಿದ್ದು ಸೂಕ್ತ ಸೌಲಭ್ಯಗಳನ್ನು ನೀಡುವುದಾಗಿ ಹೇಳಿದರು.
ವಿಧವಾ ವೇತನಾ, ಸಂಧ್ಯಾಸುರಕ್ಷಾ, ಅಂಗವಿಕಲವೇತನಾ ಸಹಿತ ಇತರ ಪಿಂಚಣಿಗೆ ಸಂಬಂಧಪಟ್ಟಂತೆ ಆದೇಶಪತ್ರಗಳನ್ನು ತಾ.ಪಂ ತಾ.ಪಂ. ಅಧ್ಯಕ್ಷೆ ರಜನಿ ಅವರು ವಿತರಿಸಿದರು.
ಉಪತಹಸೀಲ್ದಾರ್ ಅಬ್ದುಲ್ ರಹಿಮಾನ್ ವಿವಿಧ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಕಂದಾಯ ಅಧಿಕಾರಿ ಸೋಮಶೇಖರ ಮಯ್ಯ, ಪಂಚಾಯತ್ ಅಧ್ಯಕ್ಷೆ ಸಂಜೀವಿ ಪೂಜಾರ್ತಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷ ಸತೀಶ್ ಕಕರ್ೇರ, ಭೂ ನ್ಯಾಯ ಮಂಡಳಿಯ ಸದಸ್ಯರಾದ ಮಹಮ್ಮದ್ ಅಸ್ಲಾಂ, ಉಮೇಶ್, ಪಿ.ಡಿ.ಒ ಪ್ರಶಾಂತ್ ಉಪಸ್ಥಿತರಿದ್ದರು.
