ಬಂಟ್ವಾಳ:ತಾಲ್ಲೂಕಿನ ಜೆಡಿಎಸ್ ಘಟಕ ವತಿಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷ ಕಾರ್ಯಕರ್ತರ ಸಭೆಯನ್ನು ಇದೇ 12ರಂದು ಮಧ್ಯಾಹ್ನ 3ಗಂಟೆಗೆ ಬಿ.ಸಿ.ರೋಡ್ನ ಕೈಕಂಬ ಸೂರ್ಯವಂಶ ಸಭಾಂಗಣದಲ್ಲಿ ನಡೆಯಲಿದೆ.

ಪಕ್ಷದ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಜಿಲ್ಲಾ ಕಾಯರ್ಾಧ್ಯಕ್ಷ ಎಸ್.ಪಿ.ಚೆಂಗಪ್ಪ, ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಮಹಮ್ಮದ್ ಶಫಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಕ್ಷೇತ್ರಾಧ್ಯಕ್ಷ ಹಾರೂನ್ ರಶೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
