ಕೈಕಂಬ: ಭಾರತೀಯ ಜನತಾ ಪಾರ್ಟಿ ಅಮ್ಮುಂಜೆ ಇವರ ವತಿಯಿಂದ ಕಾಂಗ್ರೆಸ್ ಜನ ವಿರೋಧಿ ನೀತಿಯನ್ನು ಖಂಡಿಸಿ ಅಮ್ಮುಂಜೆ ಗ್ರಾಮ ಪಂಚಾಯತ್ ಎದುರುಗಡೆ ಸೋಮವಾರ ಬ್ರಹತ್ ಪ್ರತಿಭಟನೆ ನಡೆಯಿತು.

ಬಡವರು ದಿನನಿತ್ಯ ಬಳಸುವ ಎಲ್ಲಾ ವಸ್ತುಗಳ ಬೆಲೆ ದುಪ್ಪಟ್ಟು ಮಾಡಿ ಬಡವರ ಬದುಕನ್ನು ಅಸಹನೀಯಗೊಳಿಸಿದ ಭ್ರಷ್ಟ ಸರ್ಕಾರದ ವಿರುದ್ಧ ಪ್ರತಿರೋಧವ್ಯಕ್ತಪಡಿಸಿ ಅಮ್ಮುಂಜೆ ಗ್ರಾಮದ ಅಭಿವೃದ್ದಿ ಅಧಿಕಾರಿಯ ಮುಖಾಂತರ ರಾಜ್ಯಪಾಲರಿಗೆ ಮನವಿ ನೀಡಲಾಯಿತು.

ಈ ಸಂದರ್ಭ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದೇವಪ್ಪ ಪೂಜಾರಿ ,ಬಿಜೆಪಿ ಅಮ್ಮುಂಜೆ ಗ್ರಾಮ ಸಂಚಾಲಕ ಪುನೀತ್ ಶೆಟ್ಟಿ ,ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಧ ಲಕ್ಷ್ಮೀ ಉಪಾಧ್ಯಕ್ಷರದ ರಾಧಾ ಕೃಷ್ಣ ತಂತ್ರಿ ಪೊಳಲಿ , ಪ್ರಮುಖರಾದ ಸುಧಾಕರ ಶೆಟ್ಟಿ, ವಾಮನ ಆಚಾರ್ಯ, ರವೀಂದ್ರ ಸುವರ್ಣ,ಕಾರ್ತಿಕ್ ಬಲ್ಲಾಳ್ ರೊನಲ್ ಡಿಸೋಜಾ,ಪ್ರಮೀಳಾ,ಭಾಗೀರಥಿ, ಲೀಲಾವತಿ,ಸುರೇಶ್ ಸಾಲ್ಯಾನ್, ಪ್ರವೀಣ್ ವಿನೋದ್ ಕಾಂಬ್ಳ ಉಪಸ್ಥಿತರೆದ್ದರು
