ಗಲಾಟೆ ನೋಡಲು ಬಂದವರ ಬಂಧನ ಆರೋಪ
ಬಜ್ಪೆ: ಉಳಾಯಿಬೆಟ್ಟುವಿನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಹಿಂದೂ ಸಂಘಟನೆಗಳು ಕರೆದಿದ್ದ ಬಂದ್ ವೇಳೆ ಸುಂಕದಕಟ್ಟೆಯ ಅಯ್ಯಪ್ಪ ಶಿಬಿರದ ಮೇಲೆ ಮತಾಂಧರ ಪಡೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಇತ್ತಂಡಗಳ ಹಲವರನ್ನು ಬಂಧಿಸಿದ್ದಾರೆ. ಈತನ್ಮಧ್ಯೆ ಗಲಾಟೆ ನೋಡಲು ಬಂದವರನ್ನೇ ಪೊಲೀಸರು ಬಂಧಿಸಿದ್ದಾರೆಂಬ ಆರೋಪ ಸಹ ವ್ಯಕ್ತವಾಗಿದೆ.

ಗಲಾಟೆಗೆ ಸಂಬಂಧಿಸಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ. ಮಹಮದ್ ಮನ್ಸೂರ್, ಮಹಮದ್ ಸಿಪಾದ್, ಮಹಮದ್ ಮೊದಿನ್, ಸಂದೀಪ್, ಮೋಹನ್, ಆನಂದ, ಸುರೇಶ, ರಂಜಿತ್, ಸುರೇಶ್ ಇವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ಡಿ.8ರ ಮಧ್ಯಾಹ್ನ ಸುಂಕದಕಟ್ಟೆ ಪಾಲಿಟೆಕ್ನಿಕ್ ಕಾಲೇಜ್ ಸಮೀಪದ ಅಯ್ಯಪ್ಪ ಶಿಬಿರದ ಮೇಲೆ ಮತಾಂಧ ಯುವಕರ ಪಡೆ ದಾಳಿ ನಡೆಸಿತ್ತು. ಅಯ್ಯಪ್ಪ ವೃತಧಾರಿಗಳು ಶರಣು ಕರೆಯುವುದೇ ಈ ದಾಳಿಗೆ ಕಾರಣ ಎಂದು ಆರೋಪಿಸಲಾಗಿದೆ. ಮಧ್ಯಾಹ್ನದ ವೇಳೆ ಶಿಬಿರದತ್ತ ಆಗಮಿಸಿದ ಕಿಡಿಗೇಡಿಗಳು ಮಲಗಿದ್ದ ಅಯ್ಯಪ್ಪವೃತಧಾರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಇತ್ತಂಡಗಳ ಹಲವರು ಜಮಾಯಿಸಿ ಕೈ-ಕೈ ಮಿಲಾಯಿಸಿದ್ದರು. ಗಲಾಟೆಯನ್ನು ನಿಯಂತ್ರಿಸಲು ಪೊಲೀಸರು ಲಘುಲಾಠೀಪ್ರಹಾರ ನಡೆಸಿದ್ದರು

