ವಿಟ್ಲ: ಕಾಂಗ್ರೆಸ್ ಮುಖಂಡ ಚಿತ್ತರಂಜನ್ ಶೆಟ್ಟಿ ಎಂಬವವರಿಗೆ ತನ್ನ ಪಿಸ್ತೂಲಿನಿಂದ ಉಂಟಾದ ಫೈರಿಂಗ್ ನಿಂದ ಗಾಯಗೊಂಡಿದ್ದಾರೆ. ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತಾಡಿ ಗ್ರಾಮದಲ್ಲಿ ನೆನ್ನೆ (ಫೆ.4) ನಡೆದಿದೆ. ಇದೀಗ ಅವರನ್ನು ಪಡೀಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದುವೆಯೊಂದರ ಆಮಂತ್ರಣ ನೀಡಲು ಮಂಗಳವಾರ ಮಧ್ಯಾಹ್ನ ಅನಂತಾಡಿಯ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣ, ಹತ್ತಿರದಲ್ಲೇ ಇದ್ದ ಜಲ್ಲಿ ಕ್ವಾರಿಗೆ ಹೋಗಿ ಅವರಿಗಾಗಿ ಕಛೇರಿಯಲ್ಲಿ ಕಾಯುತ್ತಿದ್ದರು. ವೇಳೆ ತನ್ನ ಸೊಂಟದಲ್ಲಿದ್ದ ಪಿಸ್ತೂಲನ್ನು ಬಟ್ಟೆಯಿಂದ ಒರೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರಿಗರ್​​ನ್ನು ಒತ್ತಿದ್ದಾರೆ. ಗುಂಡು ಸಿಡಿದು ಕಾಲಿಗೆ ಗಾಯವಾಗಿದೆ.

By suddi9

Leave a Reply

Your email address will not be published. Required fields are marked *