ಕೈಕಂಬ: ಶ್ರೀ ದುರ್ಗೆಶ್ವರೀ ದೇವಿ ದೇವಸ್ಥಾನ ಕುಪ್ಪೆಪದವು ಇದರ ವರ್ಷಾವಧಿ ಮಹೋತ್ಸವ ಮತ್ತು ಶ್ರೀ ದುರ್ಗೆಶ್ವರೀ ಯಕ್ಷಗಾನ ಮಂಡಳಿ(ರಿ)ಇದರ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ದುರ್ಗೆಶ್ವರೀ ಯಕ್ಷ ಕಲಾ ಕೇಂದ್ರದ ಪ್ರಥಮ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಶ್ರೀ ದುರ್ಗೆಶ್ವರೀ ದೇವಸ್ಥಾನದಲ್ಲಿ ಗುರುವಾರ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರವೀಣ್ ಕುಮಾರ್ ಅಗರಿ, ಪ್ರಧಾನ ಅರ್ಚಕ ಗುರುಪ್ರಸಾದ್ ಕಾರಂತ್, ಯಕ್ಷ ಕಲಾ ಕೇಂದ್ರದ ಅಧ್ಯಕ್ಷ ವಿನಯ್ ಕಾರಂತ್, ಗೌರವ ಸಲಹೆಗಾರ ಚಂದ್ರಶೇಖರ ತುಂಬೆಮಜಲ್, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಕುಟ್ಟೆಚ್ಚಾರ್, ಜೊತೆ ಕಾರ್ಯದರ್ಶಿ ದುರ್ಗಾ ಪ್ರಸಾದ್ ಸಾಲ್ಯಾನ್ ತಾರಿಪಾಡಿ, ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಸಂಜಯ್ ಅಮೀನ್ ನಾಗಂದಡಿ, ಉಪ ಸಮಿತಿಯ ವಿಕ್ರಂ ಭಟ್, ರಾಮಕೃಷ್ಣ ಭಜನಾ ಮಂಡಳಿಯ ಉಪಾಧ್ಯಕ್ಷ ನಾರಾಯಣ ಸುವರ್ಣ ಬನದಬಳಿ ಮತ್ತು ದೇವಸ್ಥಾನದ  ಸಿಬ್ಬಂದಿವರ್ಗ ಹಾಜರಿದ್ದರು.

ಫೆಬ್ರವರಿ 12ರಿಂದ 15ರವರೆಗೆ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜರಗಳಿದ್ದು, 12ರಂದು ಶ್ರೀ ದುರ್ಗೆಶ್ವರೀ ಯಕ್ಷ ಕಲಾ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಹಾಗೂ ಯಕ್ಷ ಕಲಾ ಕೇಂದ್ರದ ವಿದ್ಯಾರ್ಥಿಗಳ ರಂಗ ಪ್ರವೇಶ ಕಾರ್ಯಕ್ರಮ ನಡೆಯಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಅರ್ಚಕ ಶ್ರೀ ಹರಿನಾರಾಯಣದಾಸ ಅಸ್ರಣ್ಣರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಯಕ್ಷ ಕಲಾ ಕೇಂದ್ರದ ವಿದ್ಯಾರ್ಥಿಗಳ ರಂಗ ಪ್ರವೇಶ ನಡೆಯಲಿದ್ದು, ಯಕ್ಷ ಗುರು ರಾಕೇಶ್ ರೈ ಆಡ್ಕ ನಿರ್ದೇಶನದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.

By suddi9

Leave a Reply

Your email address will not be published. Required fields are marked *