ಬಂಟ್ವಾಳ: ರೋಟರಿ ಮೀನ್ಸ್ ಬ್ಯುಸಿನೆಸ್ ಫೆಲೋಶಿಪ್ ಮಂಗಳೂರು ಕ್ಲಬ್ ನ 2025 ಸಾಲಿನ ನೂತನ ಅಧ್ಯಕ್ಷ ಜಯರಾಜ್ ಎಸ್ ಬಂಗೇರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.4 ರಂದು ಬಿ.ಸಿ.ರೋಡಿನ ರೋಟರಿ ಗೋಲ್ಡನ್ ಜುಬಿಲಿ ಹಾಲ್ ನಲ್ಲಿ‌ನಡೆಯಲಿದೆ.ಬುಧವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ನೀಡಿದ ಅಧ್ಯಕ್ಷ ಜಯರಾಜ್ ಬಂಗೇರ ಅವರು ಮಂಗಳೂರು ಕೆನರಾ ವಾಣಿಜ್ಯ ಮತ್ತು‌ಕೈಗಾರಿಕೆಗಳ ಸಂಸ್ಥೆಯ ಅಧಗಯಕ್ಷ ಆನಂದ ಜಿ.ಪೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು,ರೋಟರಿ‌ಜಿಲ್ಲೆ 3181 ರ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಅವರು ಪದಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

2013ರಲ್ಲಿ ಆರಂಭವಾದ ಫೆಲೋಶಿಫ್ ಗುಂಪು ಇದೀಗ ಎಲ್ಲ ಕಡೆ ವಿಸ್ತರಿಸಿದೆ.ಪ್ರಸ್ತುತ 300 ಕ್ಕು ಹೆಚ್ಚು ಕ್ಲಬ್ ಗಳಿವೆ.ಭಾರತದಲ್ಲೇ 100 ಕ್ಲಬ್ ಗಳನ್ನು ಹೊಂದಿದೆ ಎಂದ ಅವರು 2021 ರಂದು ರೋಟರಿಯನ್ ಕಿರಣ್ ಕುಮಾರ್ ಅವರು ಮಂಗಳೂರು ಕ್ಲಬ್ ನ್ನು ಆರಂಬಿಸಿದ್ದರು ಎಂದರು.
ಕ್ಲಬ್ ನ ನೂತನ ಕಾರ್ಯದರ್ಶಿಯಾಗಿ ನೆಲ್ಸನ್ ಕ್ಯಾಸ್ಟಲಿನೋ,ಖಜಾಂಚಿಯಾಗಿ ಪ್ರಸನ್ನರಾವ್,ಶ್ಯಾಮ್ ಲಾಲ್ ಎರ್ಮಾಲ್ ಉಪಾಧ್ಯಕ್ಷರಾಗಿ,ಕಿರಣ್ ಕುಮಾರ್,ಬ್ರಿಯಾನ್ ಪಿಂಟೋ,ಕಿಶನ್ ಕುಮಾರ್,ಸಾಯಿಬಾಬರಾವ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ನೆಲ್ಸನ್ ಕ್ಯಾಸ್ಟಲಿನೋ, ಪ್ರಸನ್ನರಾವ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *