ಬಂಟ್ವಾಳ : ಕರ್ತವ್ಯದಿಂದ ನಿವೃತ್ತಿಗೊಂಡ ಮಾಧವ ಬಂಗೇರ ಮೂರ್ಜೆ ಅವರಿಗೆ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಬೀಳ್ಕೊಡುವ ಹಾಗೂ ಸಮ್ಮಾನ ಕಾರ್ಯಕ್ರಮ ಪುಂಜಾಲಕಟ್ಟೆಯಲ್ಲಿರುವ ಪಿಲಾತಬೆಟ್ಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಜರಗಿತು. ಪುಂಜಾಲಕಟ್ಟೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಹನ ಚಾಲಕರಾಗಿದ್ದು, ಒಟ್ಟು 29 ವರ್ಷ ಸರಕಾರಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ಮಾಧವ ಬಂಗೇರ ಮೂರ್ಜೆ ಅವರಿಗೆ ಅವರ ಸೇವೆಯನ್ನು ಗುರುತಿಸಿ ಈ ಸನ್ಮಾನವನ್ನು ಮಾಡಲಾಗಿದೆ.

ಮಂಗಳೂರು ಜಿಲ್ಲಾ ಲೇಡಿ ಗೋಷನ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಮತ್ತು ಅರಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾಧವ ಬಂಗೇರ, ಶಾಂತಲಾ ದಂಪತಿಯನ್ನು ಸಮ್ಮಾನಿಸಿದರು. ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಮಂಗಳೂರು ದ.ಕ.ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಾ ಪ್ರಭು,ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ ಅಶೋಕ್ ಕುಮಾರ್ ರೈ,ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಶ್ ಕುಮಾರ್ ಶೆಟ್ಟಿ,ಡಾ. ದುರ್ಗಾಪ್ರಸಾದ್, ಮಂಗಳೂರು ಆಯುಷ್ ಆಸ್ಪತ್ರೆ ಆಯುಷ್ ವೈದ್ಯಾಧಿಕಾರಿ ಡಾ.ಸೋಹನ್ ಕುಮಾರ್,ವಾಮದದಪದವು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಽಕಾರಿ ಡಾ| ಉಮೇಶ್ ಅಢ್ಯಂತಾಯ, ಬಂಟ್ವಾಳ ತಾಲೂಕು ಎಲ್.ಎಚ್.ವಿ.ಮಮತಾ, ಮಂಗಳೂರು ಆರೋಗ್ಯ ಇಲಾಖೆ ಕಚೇರಿ ಅಧೀಕ್ಷಕಿ ಶಾಲಿನಿ, ನಿವೃತ್ತ ಸರ್ವಿಸ್ ಇಂಜಿನಿಯರ್ ಮಹಾಲಿಂಗ ಭಟ್ ಬದಿಯಡ್ಕ,ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪುಂಜಾಲಕಟ್ಟೆ ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲಾ ಪ್ರಾಂಶುಪಾಲ ಸಂತೋಷ್,ವಿವಿಧ ಆರೋಗ್ಯ ಇಲಾಖಾಧಿಕಾರಿಗಳು, ಸಿಬಂದಿ ವರ್ಗ ಉಪಸ್ಥಿತರಿದ್ದರು. ಪ್ರಭಾಕರ ಪಿ.ಎಂ. ಅವರು ಸ್ವಾಗತಿಸಿದರು. ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *