ಬಂಟ್ವಾಳ: ಕೊಳ್ನಾಡು ಗ್ರಾಮದ ಮಂಚಿಯಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಪ್ರಯುಕ್ತ ಪೂರ್ವಭಾವಿಯಾಗಿ ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥಾ ಸ್ಪರ್ಧೆ ಮತ್ತು ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.


ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥಾ ಸ್ಪರ್ಧೆ ಮತ್ತು ಕವನ ಸ್ಪರ್ಧೆಯ ಮಾಹಿತಿ ಪತ್ರವನ್ನು ಅನಾವರಣಗೊಳಿಸಿ  ಮಾತನಾಡಿದ, ನಿವೃತ್ತ ಶಿಕ್ಷಕಿ ಹಾಗೂ ಬರಹಗಾರರಾದ  ಅನುಸೂಯ ರಾವ್, “ಬಂಟ್ವಾಳ ತಾಲೂಕಿನ ಅನುಭವಿ ಹಾಗೂ ಯುವ ಬರಹಗಾರರಿಗೆ ಇದೊಂದು ಉತ್ತಮ ವೇದಿಕೆ ಆಗಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಇನ್ನಷ್ಟು ಹೊಸ ಪ್ರತಿಭೆಗಳು ಮೂಡಿಬರಲು ಸಾಧ್ಯವಿದೆ”. ಎಂದರು.
ಸ್ಮರಣ ಸಂಚಿಕೆ ಮತ್ತು ಆರ್ಥಿಕ ಸಮಿತಿಯ ಪೂರ್ವಭಾವಿ ಸಭೆಯು ನಡೆಯಿತು.ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾದ ರಾಮ್ ಪ್ರಸಾದ್ ರೈ ತಿರುವಾಜೆ,ಆರ್ಥಿಕ ಸಮಿತಿಯ ಸಹ ಸಂಚಾಲಕರಾದ ಚಂದ್ರಹಾಸ ರೈ ಬಾಲಾಜಿಬೈಲು, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ನಿಶ್ಚಲ್ ಶೆಟ್ಟಿ, ಉಪಾಧ್ಯಕ್ಷರಾದ ಗಣೇಶ್ ಪ್ರಭು, ಕೋಶಾಧಿಕಾರಿಯಾದ ಸುಲೈಮಾನ್ ಸುರಿಬೈಲು, ಮ್ಯಾಕ್ಸಿಮ್ ಫರ್ನಾಂಡಿಸ್, ವಿಜಯಾ ಬಿ ಶೆಟ್ಟಿ, ರಶ್ಮಿತಾ ಸುರೇಶ್, ವಿಜಯಲಕ್ಷ್ಮಿ ಕಟೀಲು, ಮಹಮ್ಮದ್ ಮನ್ಸೂರ್ ಕುಕ್ಕಾಜೆ ಉಪಸ್ಥಿತರಿದ್ದರು.
 ಪ್ರಧಾನ ಕಾರ್ಯದರ್ಶಿ  ಎಮ್ ಡಿ ಮಂಚಿ ಸ್ವಾಗತಿಸಿದರು. ಲ. ಜಯ ಪ್ರಕಾಶ್ ರೈ ಮೇರಾವು ವಂದಿಸಿದರು. ಸ್ಮರಣ ಸಂಚಿಕೆ ಸಮಿತಿಯ ಸಂಚಾಲಕರಾದ ಹಮೀದ್ ಡಿ ಕಾರ್ಯಕ್ರಮ ನಿರ್ವಹಿಸಿದರು. 

By Suddi9

Leave a Reply

Your email address will not be published. Required fields are marked *