ಸಂಸದ ಸೆಂಥಿಲ್ ರೈ ಮನೆಗೆ ಭೇಟಿ
ಬಂಟ್ವಾಳ: ತಮಿಳುನಾಡಿನ ತಿರುವಳ್ಳೂರ್ ಸಂಸದರು, ದ.ಕ. ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿಗಳಾದ ಸಸಿಕಾಂತ್ ಸೆಂಥಿಲ್ ರವರು ಭಾನುವಾರ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ಕಳ್ಳಿಗೆಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಪ್ರಸಕ್ತ ಜಿಲ್ಲೆ,ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್,ದ.ಕ.ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಶಬೀರ್ ಸಿದ್ದಕಟ್ಟೆ,ಆರೋಗ್ಯ ರಕ್ಷಾ ಸಮಿತಿ ಸದಸ್ಯವೆಂಕಪ್ಪ ಪೂಜಾರಿ,ಡೆನ್ಜಿಲ್ ನೊರೊನ್ಹಾ ಮೊದಲಾದವರಿದ್ದರು.
ಇದೇವೇಳೆಸಂಸದ ಸೆಂಥಿಲ್ ಅವರನ್ನು ಮಾಜಿ ಸಚಿವ ರಮಾನಾಥ ರೈ ಗೌರವಿಸಿದರು.
