Published On: Sun, Nov 10th, 2024

ಬಂಟ್ವಾಳ: ವಟಪುರ ಕ್ಷೇತ್ರದಲ್ಲಿ ಶ್ರೀ ವಿಶ್ವ ರೂಪ ದರ್ಶನ”

ಬಂಟ್ವಾಳ: ವಟಪುರ ಕ್ಷೇತ್ರವೆಂದು ಪ್ರತೀತಿ ಹೊಂದಿರುವ ಬಂಟವಾಳ ಶ್ರೀ  ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ‌ 23 ನೇ  ವರ್ಷದ “ಶ್ರೀ ವಿಶ್ವ ರೂಪ ದರ್ಶನ” ವು ಭಾನುವಾರ ಪ್ರಾತಃಕಾಲ 4.00 ಗಂಟೆಯ  ಬ್ರಾಹ್ಮೀ ಮುಹೂರ್ತದಲ್ಲಿ ನೆರವೇರಿತು.


ದೇವಳದ  ಪ್ರದಾನ ಅರ್ಚಕರಾದ ಶ್ರೀನಿವಾಸ ಭಟ್ ಅವರು ದೇವರ ಸಾನಿಧಗಯದಲ್ಲಿರುವ ತುಳಸಿಕಟ್ಟೆ ಮುಂಭಾಗ ದೀಪ ಪ್ರಜ್ವಲನೆಗೈಯುತ್ತಿದ್ದಂತೆ ಸೇರಿದ್ದ ಭಜಕರು ದೇವಳದ  ಸುತ್ತ ಜೋಡಿಸಿದ್ದ ಹಣತೆದೀಪವನ್ನು ಏಕಕಾಲದಲ್ಲಿ ಪ್ರಜ್ವಲಿಸಿದರು.


ಈ ಸಂದರ್ಭ ದೇವಳದ ಒಳಾಂಗಣದಲ್ಲಿ ಹಾಗೂ ಶ್ರೀದೇವರನ್ನು ಹೂವಿನಿಂದ ವಿಶೇಷಾಲಂಕಾರ ಮಾಡಲಾಗಿತ್ತು.
ಕಾಕಡಾರತಿ, ಜಾಗರ ಪೂಜೆ,ಭಜಕರೆಲ್ಲರಿಗೂ ಶ್ರೀ ದೇವರ ವಿಶೇಷ  ವಿಶ್ವರೂಪದರ್ಶನ ಭಾಗ್ಯ , ಪ್ರಸಾದ  ವಿತರಣೆ ನಡೆಯಿತು.


ಬೆಳಗ್ಗಿನ ಜಾವದಿಂದ 7 ಗಂಟೆಯವರೆಗೆ ನಿರಂತರವಾಗಿ ವಿಶೇಷ ಭಜನಾ ಕಾರ್ಯಕ್ರಮವು ಜರಗಿತು.
ಪೈ ಇಂಟರ್ನ್ಯಾಷನಲ್  ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಜಿತ್ ಪೈ ಮತ್ತು  ಕೆನರಾ ಬ್ಯಾಂಕ್ ಬಂಟ್ವಾಳ ಶಾಖೆ ಸಹಕಾರ ನೀಡಿತ್ತು‌.ದೇವಳದ ಆಡಳಿತ ಮೊಕ್ತೇಸರರು,ಮೊಕ್ತೇಸರರು,ಮತ್ತಿತರ ಗಣ್ಯರು,ನೂರಾರು ಸಂಖ್ಯೆಯಲ್ಲಿಭಜಕರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter