ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಮೈದಾನದಲ್ಲಿ ಶನಿವಾರ ಮುಕ್ತಾಯಗೊಂಡ ಮೂರು ದಿನಗಳ ಕಾಲ ನಡೆದ 16ನೇ ರಾಜೀವ್ ಗಾಂಧಿ ಆರೋಗ್ಯ ವಿ.ವಿ ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ಅತಿಥೇಯ ಆಳ್ವಾಸ್ತಂಡವು ಹತ್ತು ಹೊಸ ದಾಖಲೆಗಳ ಸಹಿತ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನಿಯಾಗುವುದರ ಜತೆಗೆ 86 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಪುರುಷರ ವಿಭಾಗದಲ್ಲಿ 55 ಅಂಕಗಳೊಂದಿಗೆ ಆಳ್ವಾಸ್ ಹಾಸ್ಪಿಟಲ್ ಅಡ್ಮಿನಿಷ್ಟ್ರೇಶನ್ ಕಾಲೇಜು ಪ್ರಥಮ ಹಾಗೂ 29 ಅಂಗಕಗಳೊಂದಿಗೆ ಬೆಂಗಳೂರಿನ ಸೈಂಟ್ ಜಾನ್ ಮೆಡಿಕಲ್ ಕಾಲೇಜು ದ್ವಿತೀಯ ಸ್ಥಾನ ಪಡೆದಿದೆ.
ಮಹಿಳೆಯರ ವಿಭಾಗದಲ್ಲಿ 34 ಅಂಕಗಳೊಂದಿಗೆ ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜು ಪ್ರಥಮ ಹಾಗೂ 31ಅಂಕಗಳೊಂದಿಗೆ ಆಳ್ವಾಸ್ ಹಾಸ್ಪಿಟಲ್ ಅಡ್ಮಿನಿಷ್ಟ್ರೇಶನ್ ಕಾಲೇಜು ದ್ವಿತೀಯ ಸ್ಥಾನ ಪಡೆದಿದೆ.
ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಸೃಜನಾ.ಕೆ. 23 ಅಂಕಗಳೊಂದಿಗೆ ಮಹಿಳೆಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ. ಪುರುಷರ ವಿಭಾಗದಲ್ಲಿ ಆಳ್ವಾಸ್ ಹಾಸ್ಪಿಟಲ್ ಅಡ್ಮಿನಿಷ್ಟ್ರೇಶನ್ ಕಾಲೇಜಿನ ಮಹಮ್ಮದ್ ಅಫೀಫ್ ಓವೈಸಿ ಹಾಗೂ ನಿಪ್ಪಾಣಿ ಕೆಎಲ್ಇಎಸ್ ಫಾರ್ಮಸಿ ಕಾಲೇಜಿನ ಅನೀತ್.ಕೆ.ಪಾಟೀಲ್ ತಲಾ 15 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ.
ಹೊಸ ದಾಖಲೆ: ಕ್ರೀಡಾಕೂಟದ ಮೂರನೇ ದಿನ ಮತ್ತೆ ಮೂರು ಹೊಸ ದಾಖಲೆಗಳಾಗಿವೆ. ಹ್ಯಾಮರ್ ತ್ರೋನಲ್ಲಿ ಆಳ್ವಾಸ್ನ ಚೈತ್ರಾ ಶೆಟ್ಟಿ 25.34ಮೀ ದೂರ ಎಸೆದು, 2012-13ರಲ್ಲಿ ಆಳ್ವಾಸ್ ನ್ಯಾಚೂರೋಪತಿ ಕಾಲೇಜಿನ ಸ್ಪೂತರ್ಿ ಅವರ 24.26 ಮೀ ದೂರದ ದಾಖಲೆಯನ್ನು ಹಿಂದಿಕ್ಕಿದ್ದಾರೆ. 400 ಮೀ ಓಟದಲ್ಲಿ ಆಳ್ವಾಸ್ನ ಮನೋಹರ.ಎಲ್.ಇ 52 ಸೆಕೆಂಡ್ ಕ್ರಮಿಸಿ 1999-2000ರಲ್ಲಿ ಮೈಸೂರು ಎಂಎಂಸಿ ರಾಜಗೋಪಾಲ್ 52.02 ಸೆ. ದಾಖಲೆಯನ್ನು ಅಳಿಸಿದ್ದಾರೆ. 4*100 ಮೀಟರ್ ರಿಲೇಯಲ್ಲಿ ಆಳ್ವಾಸ್ ಹಾಸ್ಪಿಟಲ್ ಅಡ್ಮಿನಿಷ್ಟ್ರೇಶನ್ ತಂಡವು 43.6 ಸೆಕೆಂಡ್ ಕ್ರಮಿಸಿ ಬೆಂಗಳೂರು ಸೈಂಟ್ ಜಾನ್ ಮೆಡಿಕಲ್ ಕಾಲೇಜು 2013-14ರ 46.02 ಸೆ. ದಾಖಲೆಯನ್ನು ಅಳಿಸಿದೆ.
ಈ ಕ್ರೀಡಾಕೂಟದಲ್ಲಿ ಒಟ್ಟು 12 ನೂತನ ದಾಖಲೆಗಳಾಗಿದ್ದು ಇವುಗಳಲ್ಲಿ ಹತ್ತು ದಾಖಲೆಯನ್ನು ಬರೆದ ಆಳ್ವಾಸ್ ಗಮನಾರ್ಹ ಸಾಧನೆ ದಾಖಲಿಸಿದೆ.
ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಮೂಡುಬಿದರೆ ಪುರಸಭಾ ಅಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ, ಆಳ್ವಾಸ್ ಆಡಳಿತಾಧಿಕಾರಿ ಸ್ಮಿತಾ ಐತಾಳ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ದೈಹಿಕ ಶಿಕ್ಷಣ ನಿದರ್ೇಶಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
3ನೇ ದಿನದ ಸ್ಪಧರ್ೆಗಳ ಫಲಿತಾಂಶ:
ಪುರುಷರ ವಿಭಾಗ
10 ಸಾವಿರ ಮೀ-ಓಟ
ಅಮಿತ್.ಆರ್.ಪಾಟೀಲ್, ಕೆಎಲ್ಇಎಸ್ ಫಾರ್ಮಸಿ ಕಾಲೇಜು ನಿಪ್ಪಾಣಿ(ಪ್ರ),
ಸುದೀಪ್ ಕುಮಾರ್.ಎನ್, -ಆಳ್ವಾಸ್ ಮೂಡುಬಿದಿರೆ(ದ್ವಿ)
ರತು.ಎನ್.ರವಿ, ಫಾದರ್ ಮುಲ್ಲರ್ ಕಾಲೇಜು(ತೃ),
400ಮೀ ಓಟ:
ಮನೋಹರ್.ಎಲ್.ಇ,- ಆಳ್ವಾಸ್ ಮೂಡುಬಿದಿರೆ( ಪ್ರ),
ಮಹಮ್ಮದ್ ಸಫೀರ್, ಫಾದರ್ ಮುಲ್ಲರ್ಸ್ ಮಂಗಳೂರು(ದ್ವಿ),
ಅಕ್ಷಯ್ ಬಾಬು, ಮೊಬಿಲಿಟಿ ಇಂಡಿಯ ಬೆಂಗಳೂರು (ತೃ)
4*100 ಮೀ ರೀಲೆ:
ಆಳ್ವಾಸ್ ಹಾಸ್ಟಿಟಲ್ ಅಡ್ಮಿನಿಸ್ಟೇಶನ್ ಕಾಲೇಜು(ಪ್ರ),
ಸೈಂಟ್ ಜಾನ್ ಮೆಡಿಕಲ್ ಕಾಲೇಜು ಬೆಂಗಳೂರು (ದ್ವಿ),
ಫಾದರ್ ಮುಲ್ಲರ್ ಹೊಮಿಯೋಪತಿ ಮೆಡಿಕಲ್ ಕಾಲೇಜ್(ತೃ)
ಮಹಿಳೆಯರ ವಿಭಾಗ:
10 ಸಾವಿರ ಮೀ ಓಟ:
ಪ್ರಸನ್ನ .ಕೆ.ಪಿ, ಕೆಎಲ್ಇಎಸ್ ನಸರ್ಿಂಗ್ ಕಾಲೇಜು ಧಾರವಾಡ(ಪ್ರ),
ಶಾಲಿನಿ.ಐ.- ಶ್ರೀನಿವಾಸ ಫಾರ್ಮಸಿ ಕಾಲೇಜು ಮಂಗಳೂರು( ದ್ವಿ)
ಹ್ಯಾಮರ್ ತ್ರೋ:
ಚೈತ್ರಾ.ಆರ್.ಶೆಟ್ಟಿ, ಆಳ್ವಾಸ್(ಪ್ರ),
ಮಿನು ಸೆಬಾಸ್ಟಿನ್, ಫಾದರ್ ಮುಲ್ಲರ್ ಮಂಗಳೂರು(ದ್ವಿ),
ವಷರ್ಾ.ಆರ್., ಆಳ್ವಾಸ್ ಮೂಡುಬಿದಿರೆ(ತೃ),
4*400 ರಿಲೇ-
ಫಾದರ್ ಮುಲ್ಲರ್ಸ್ ಹೊಮಿಯೋಪತಿ ಮೆಡಿಕಲ್ ಕಾಲೇಜು ಮಂಗಳೂರು(ಪ್ರ),
ಆಳ್ವಾಸ್ ಕಾಲೇಜು ಆಫ್ ನ್ಯಾಚುರೋಪತಿ ಎಂಡ್ ಯೋಗಿಕ್ ಸೈನ್ಸ್(ದ್ವಿ),
ಫಾದರ್ ಮುಲ್ಲರ್ ಹೊಮಿಯೋಪತಿ ನಸರ್ಿಂಗ್ ಕಾಲೇಜು(ತೃ).
400ಮೀ ಓಟ-
ವೆರೋನಿಕಾ ಲೋಬೋ, ಫಾದರ್ ಮುಲ್ಲರ್ಸ್ ಮಂಗಳೂರು(ಪ್ರ)
ಸಹನಾ.ಪಿ.ಯ, ಸಕರ್ಾರಿ ನಸರ್ಿಂಗ್ ಕಾಲೇಜು ಮೈಸೂರು(ದ್ವಿ),
ಅಲೀನಾ ಥಾಮಸ್, ಫಾದರ್ ಮುಲ್ಲರ್ ಮಂಗಳೂರು(ತೃ).
……….
ಎಂಬಿಡಿ_ಡಿಸೆಂಬರ್6_3 (ಆಳ್ವಾಸ್ ಓವರ್ ಆಲ್ ಚಾಂಪಿಯನ್)
* ರಾಜೀವ್ ಗಾಂಧಿ ಆರೋಗ್ಯ ವಿ.ವಿ ಕ್ರೀಡಾಕೂಟದಲ್ಲಿ ಆಳ್ವಾಸ್ ಸಮಗ್ರ ಪ್ರಶಸ್ತಿ ಪಡೆದಿದೆ.
ಎಂಬಿಡಿ_ಡಿಸೆಂಬರ್6_3 (ಇಂಡಿವಿಶ್ಯುಯಲ್ ಚಾಂಪಿಯನ್)
* ರಾಜೀವ್ ಗಾಂಧಿ ಆರೋಗ್ಯ ವಿ.ವಿ ಕ್ರೀಡಾಕೂಟದಲ್ಲಿ ಆಳ್ವಾಸ್ ವೈಯಕ್ತಿಕ ಪ್ರಶಸ್ತಿ ಪಡೆದ ಕ್ರೀಡಾಪಟುಗಳು
ಎಂಬಿಡಿ_ಡಿಸೆಂಬರ್6_3( ಥಡರ್್ ಡೇ ರೆಕಾಡರ್್)
ರಾಜೀವ್ ಗಾಂಧಿ ಆರೋಗ್ಯ ವಿ.ವಿ ಕ್ರೀಡಾಕೂಟದಲ್ಲಿ 3ನೇ ದಿನದ ದಾಖಲೆ ಮಾಡಿದ ಆಳ್ವಾಸ್ ತಂಡ
ಎಂಬಿಡಿ_ಡಿಸೆಂಬರ್6_3( ರಿಲೇ ರೆಕಾಡರ್್)
ರಾಜೀವ್ ಗಾಂಧಿ ಆರೋಗ್ಯ ವಿ.ವಿ ಕ್ರೀಡಾಕೂಟದಲ್ಲಿ ರಿಲೇಯಲ್ಲಿ ದಾಖಲೆ ಮಾಡಿದ ಆಳ್ವಾಸ್ ತಂಡ
ದಾಖಲೆ ಬರೆದ ‘ಆಳ್ವಾಸ್’ ಕ್ರೀಡಾಂಗಣ
ಇದೀಗ ಮುಕ್ತಾಯಗೊಂಡಿರುವ 16ನೇ ರಾಜೀವ್ ಗಾಂಧಿ ಆರೋಗ್ಯ ವಿ.ವಿ ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ಅತಿಥೇಯ ಆಳ್ವಾಸ್ತಂಡವು 6ನೇ ಬಾರಿಗೆ ಸಮಗ್ರ ಪ್ರಶಸ್ತಿ ಪಡೆದಿದೆ. ಒಟ್ಟು ಆರು ಬಾರಿ ಈ ಅಂತರ್ ಕಾಲೇಜು ಕ್ರೀಡಾ ಕೂಟವನ್ನು ಸಂಘಟಿಸಿರುವುದು ಆಳ್ವಾಸ್ನ ಹಿರಿಮೆ. ಅದರಲ್ಲೂ ಈ ಬಾರಿ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲೇ ಈ ಕ್ರೀಡಾ ಕೂಟಕ್ಕಾಗಿ ನೂತನ 400 ಮೀ. ಮಡ್ ಟ್ರ್ಯಾಕ್ ರೂಪಿಸಿದ್ದು ಈ ಹೊಸ ಟ್ರ್ಯಾಕ್ನಲ್ಲೇ ಕೂಟದಲ್ಲಿ 12 ಹೊಸ ದಾಖಲೆ ಮೂಡಿ ಬಂದಿರುವುದು ಅದರಲ್ಲೇ ಅತಿಥೇಯ ಆಳ್ವಾಸ್ ತಂಡ 10 ದಾಖಲೆ ತಮ್ಮದಾಗಿಸಿಕೊಂಡಿರುವುದು ಗಮನಾರ್ಹವಾಗಿದೆ.



