ಮೂಡುಬಿದರೆ: ಕರಾಟೆ ಶಿಸ್ತಿನ ಕಲೆ. ದೇಹ ಹಾಗೂ ಮನಸ್ಸನ್ನು ಪಕ್ವಗೊಳಿಸುವ ಶಕ್ತಿ ಕರಾಟೆಗಿದೆ. ಆತ್ಮರಕ್ಷಣೆಯ ಕಲೆಯಾದ ಕರಾಟೆಯನ್ನು ಸಮಾಜ ರಕ್ಷಣೆಗೋಸ್ಕರ ಬಳಸಬೇಕೆಂದು ವೆಸ್ಟನರ್್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷ ವಾಲ್ಟರ್ ಸ್ಟೀಫನ್ ಮೆಂಡಿಸ್ ಹೇಳಿದರು.
ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ ಕರಾಟೆ ಸಂಸ್ಥೆ ವತಿಯಿಂದ ಮಹಾವೀರ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
mbd_dec6_1
ಮಹಾವೀರ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ದೀಕ್ಷಿತ್ ಕರಾಟೆ ಚಾಂಪಿಯನ್ಶಿಪ್ಗೆ ಚಾಲನೆ ನೀಡಿದರು. ಕರಾಟೆ ಕಲಿಯುವುದರಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ. ಅಲೋಚಾನಾ ಕ್ರಮ, ಏಕಾಗ್ರತೆ ವೃದ್ಧಿಯಾಗುತ್ತದೆ. ಕರಾಟೆಯನ್ನು ಕೇವಲ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಉಪಯೋಗಿಸಬೇಕು. ಕರಾಟೆಯನ್ನು ದುರುಪಯೋಗಪಡಿಸಬಾರದು ಎಂದರು.
ವೆಸ್ಟನರ್್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲೆ ಫ್ಲೋರಾ ಮೆಂಡಿಸ್, ಶೋರಿನ್-ರಿಯೂ ಸಂಸ್ಥೆಯ ಸಂಚಾಲಕ ನದೀಮ್, ಮುಖ್ಯ ಶಿಕ್ಷಕ ಸಫ್ರರಾಜ್, ಸಹ ಶಿಕ್ಷಕ ರಾಜೇಶ್, ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ, ಉದ್ಯಮಿಗಳಾದ ಅಬ್ದುಲ್ ಸಲೀಂ, ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.
ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು. ರಾಜ್ ಪ್ರಸಾದ್ ವಂದಿಸಿದರು. ಮೂಡುಬಿದರೆ ಶ್ರೀ ಮಹಾವೀರ ಕಾಲೇಜು, ಮಂಗಳೂರಿನ ವೆಸ್ಟನರ್್ ಇನ್ನಸಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಎಂ.ಕೆ.ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಹಯೋಗದಲ್ಲಿ ನಡೆಯುತ್ತಿರುವ 2ನೇ ವರ್ಷದ ಕರಾಟೆ ಚಾಂಪಿಯಶಿಪ್ ಇದಾಗಿದೆ.

By suddi9

Leave a Reply

Your email address will not be published. Required fields are marked *