ಪುತ್ತೂರು: ಎಸ್.ಬಿ.ಐ ಬ್ಯಾಂಕ್ ಸಿಬ್ಬಂದಿ ಸಾಲ ವಾಪಸ್ಸು ಕೇಳಲು ಹೋದಾಗ ಗನ್​​​ ತೋರಿಸಿ ಬೆದರಿಕೆ ಹಾಕಿರುವ ಪುತ್ತೂರಿನಲ್ಲಿ ನಡೆದಿದೆ. ಬಲ್ನಾಡು ಉಜುರುಪಾದೆ ನಿವಾಸಿ ಕೃಷ್ಣ ಕಿಶೋರ್ ಹಾಗೂ ಅಖಿಲೇಶ್‌ ಬಳಿ ಸಾಲ ವಾಪಸು ಕೇಳಿದಕ್ಕೆ ಬ್ಯಾಂಕ್​​ ಸಿಬ್ಬಂದಿಗೆ ಪಿಸ್ತೂಲ್​​ ತೋರಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಪೊಲೀಸ್​​ ದೂರು ನೀಡಲಾಗಿದೆ.

ಅಖಿಲೇಶ್ ಪತ್ನಿ ಕೀರ್ತಿ ಅಖಿಲೇಶ್ ಎಂಬುವವರು ಎಸ್.ಬಿ.ಐ ಬ್ಯಾಂಕ್​ನಿಂದ 2 ಕೋಟಿ ರೂ. ಸಾಲ ಪಡೆದಿದ್ದಾರೆ. ಸಾಲ ಮರುಪಾವತಿಸದೆ ಸತ್ತಾಯಿಸುತ್ತಿದ್ದ ಕೀರ್ತಿ ಅಖಿಲೇಶ್​​ಗೆ ಬ್ಯಾಂಕ್ ಮ್ಯಾನೇಜರ್ ಚಿನ್ಮಯ ಹಲವು ಬಾರಿ ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ. ಇದಕ್ಕೂ ಅವರು ಉತ್ತರ ನೀಡಿದ ಕಾರಣ ಬ್ಯಾಂಕ್ ಮ್ಯಾನೇಜರ್‌ ತನ್ನ ತಂಡದೊಂದಿಗೆ ಕೀರ್ತಿ ಅಖಿಲೇಶ್ ಮನೆಗೆ ಧಾವಿಸಿದ್ದಾರೆ.

ಬ್ಯಾಂಕ್​​ನವರು ಮನೆ ಬಂದ ಕಾರಣ ಆಕ್ರೋಶಗೊಂಡ ಕೀರ್ತಿ ಪತಿ ಅಖಿಲೇಶ್ ಹಾಗೂ ಆತನ ತಂದೆ ಕೃಷ್ಣ ಕಿಶೋರ್ ಗಲಾಟೆ ಮಾಡಿದ್ದಾರೆ. ಈ ವೇಳೆ ಕೃಷ್ಣ ಕಿಶೋರ್ ಮನೆಯಲ್ಲಿದ್ದ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.

By suddi9

Leave a Reply

Your email address will not be published. Required fields are marked *