ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಮಲ್ಲಿಕಟ್ಟೆ ಸರ್ಕಲ್ ಬಳಿ ವಿಹೆಚ್​ಪಿ ಧರಣಿ ನಡೆಸಿದೆ. ಈ ವೇಳೆಯಲ್ಲಿ .ಎಚ್.ಪಿ ಮುಖಂಡ ಶರಣ್ ಪಂಪ್ ವೆಲ್ ಮಾತನಾಡಿದ್ದು, ಮುಂದಿನ ವಾರ ಈದ್ ಮೆರವಣಿಗೆ ಮೇಲೆ ಎಲ್ಲಾ ಹಿಂದುಗಳು ದಾಳಿ ಮಾಡಿದ್ರೆ ಏನಾಗಬಹುದು ಅಂತಾ ಊಹೆ ಇದ್ಯಾ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ನಿನ್ನೆಯ ದಾಳಿಕೋರರಿಗೆ ಎಚ್ವರಿಕೆ ಸಂದೇಶ ಕೊಡುತ್ತಿದ್ದೇವೆ. ಸರ್ಕಾರ ಈದ್ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಈದ್ ನೆಪದಲ್ಲಿ ಕೂಡ ದಾಳಿ ಮಾಡೋ ಸಾದ್ಯತೆ ಇದೆ. ನಿನ್ನೆಯ ಮಂಡ್ಯ ಗಲಭೆ ಹಿಂದೆ ನಿಷೇಧಿತ ಪಿ.ಎಫ್.ಐ ಕೈವಾಡ ಇದೆ‌. ನಮ್ಮ ಮೆರವಣಿಗೆಗೆ ರಾಜ್ಯ ಸರ್ಕಾರ ಭದ್ರತೆ ನೀಡಲು ಸಿದ್ದವಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಿಲಿಟರಿ ಕರೆಸುತ್ತೇವೆ. ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಮಿಲಿಟರಿ ಭದ್ರತೆ ಕೇಳುತ್ತೇವೆ ಎಂದಿದ್ದಾರೆ.

By suddi9

Leave a Reply

Your email address will not be published. Required fields are marked *