ಕೈಕಂಬ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ೩೮ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಬೆನಕ ಮಂಟಪದ ಸಭಾಂಗಣದಲ್ಲಿ ಶನಿವಾರ ನಮ್ಮೂರ ಪ್ರತಿಭೆಗಳನ್ನು ಸನ್ಮಾನಿಸಲಾಯಿತು.


ಕರ್ನಾಟಕ ರಾಜ್ಯದಲ್ಲಿ ದ್ವಿತೀಯ ಪಿಯುಸಿಯಲ್ಲಿ ೯೯% ೪ನೇ ರ್ಯಾಂಕ್ ವಿಜೇತೆ ಕು.ಮಾನ್ಯ ಪೊಳಲಿ ಇವರು ಪೊಳಲಿ ಕೇಶವ ದೇವಾಡಿಗ ಮತ್ತು ಜಯಂತಿ ದಂಪತಿಗಳ ಪುತ್ರಿ.



ಮತ್ತು ೧೦ನೇ ತರಗತಿಯಲ್ಲಿ ಸಿಬಿಎಸ್ಸಿ ೯೪.೬%ಪಡೆದ ಕು. ವೃಷಾ ಪಲ್ಲನೆಲ ಅಡ್ಡೂರು ಇವರು ಎ.ಭೋಜ ಮೂಲ್ಯ ಹಾಗೂ ಸುಜಾತ ದಂಪತಿಗಳ ಪುತ್ರಿ. ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇಗುಲದ ಅನುವಂಶಿಕ ಹರಿನಾರಾಯಣ ದಾಸ ಅಸ್ರಣ್ಣ
ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಮಂಗಳೂರಿನ ಅಧ್ಯಕ್ಷ ಜಯಾನಂದ ಎಂ ಶಿಕ್ಷಕಿ , ಸಾಹಿತಿ ವಿಜಯಲಕ್ಷ್ಮೀ ಕಟೀಲು
ಉದ್ಯಮಿ ಚಂದ್ರಹಾಸ ಶೆಟ್ಟಿ ನಾರ್ಲ, ಉಳ್ಳಾಲದ ಶ್ರೀ ಭಗವತಿ ದೇವಸ್ಥಾನದ ಮೊಕ್ತೇಸರರು ರಾಘವ, ಗುರುಪುರ ಕಾಂಗ್ರೆಸ್ ಮಹಿಳಾ ಬ್ಲಾಕ್ ಅಧ್ಯಕ್ಷೆ ಜಯಲಕ್ಷ್ಮೀ ಸುಭಾಸ್ಚಂದ್ರ, ಕೆಪಿಸಿಸಿ ಸದಸ್ಯ ಚಂದ್ರಹಾಸ್ ಸಬಿಲ್, ಕಾಂಜಿಲಕೋಡಿ ಬದ್ರುಲ್ ಹುದಾ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಎಂ ಎ ಅಹಮ್ಮದ್ ಬಾವ, ನಂದ್ಯ ಚಿದಾನಂದ ಗುರಿಕಾರ , ಸುಳ್ಯಗುತ್ತು ಸುಬ್ಬಯ್ಯ ಭಂಡಾರಿ, ಲೋಕನಾಥ ಪೊನ್ನೆಲ, ಸುಭಾಸ್ ಚಂದ್ರ ಪೊನ್ನೆಲ ಅಶೋಕ್ ಗರಡಿ, ಪ್ರೇಮನಾಥ್ ನಂದ್ಯ, ಸುಕುಮಾರ ಪಲ್ಲನೆಲ, ಶಂಕರ ಪೂಜಾರಿ, ಭೋಜಸುವರ್ಣ ಪೊನ್ನೆಲ, ಆನಂದ ಕುಲಾಲ್ ರಾಯರಬೆಟ್ಟು, ಸುರೇಶ್ ಗರಡಿ ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು.
