ಬಂಟ್ವಾಳ : ಹಿಂದೂ ಜಾಗರಣ ವೇದಿಕೆ ಕಲ್ಲಡ್ಕದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ ಭಾನುವಾರ ಸಂಜೆ  ನಡೆಯಿತು.

ಮಧ್ಯಾಹ್ನ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ, ಮೆಲ್ಕಾರ್‌ ರಾಮದೇವ ಸಭಾಭವನ ಮತ್ತು ವೀರಕಂಭ ಶಾರದಾ ಭಜನಾ ಮಂದಿರ ಬಳಿಯಿಂದ ಏಕಕಾಲಕ್ಕೆ ವಾಹನ ಜಾಥಾ ಸಾಗಿ ಬಂದು ಕಲ್ಲಡ್ಕ ಉಮಾಶಿವ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಕಲ್ಲಡ್ಕ ಉಮಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿ.ಜಾ.ವೇ. ಕರ್ನಾಟಕ ದಕ್ಷಿಣಪ್ರಾಂತ ಕಾರ್ಯಕಾರಿಣಿ ಸದಸ್ಯೆ ಪ್ರಜ್ಞಾ ಕಶ್ಯಪ್‌  ದಿಕ್ಸೂಚಿ ಭಾಷಣ ಮಾಡಿದರು.
ಭಾರತೀಯ ಭೂಸೇನೆನಿವೃತ ಯೋಧರಾದ ಎ.ಸಿ.ಪಿ ಹವಲ್ದಾರ್‌ ಜಯಕುಮಾರ್‌ ಕೆದಿಲ ಅವರು ಗೌರವ ಉಪಸ್ಥಿತರಿದ್ದರು.ಹಿ.ಜಾ.ವೇ.ಯ ಜಿಲ್ಲಾ ಸಂಯೋಜಕ್ ನರಸಿಂಹ ಮಾಣಿ,  ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ, ಹಿ ಜಾ ಪ್ರಮುಖ ರತ್ನಾಕರ ಶೆಟ್ಟಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪುಷ್ಪರಾಜ್ ಕಮ್ಮಾಜೆ, ತಾಲೂಕು ಸಂಯೋಜಕರಾದ ಹರ್ಷ ವಿಟ್ಲವೇದಿಕೆಯಲ್ಲಿ ಉಪಸ್ಥಿತರಿದ್ದರು.ಪರಿವಾರ ಸಂಘಟನೆಯ ಹಿರಿಯರು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ತಿಲಕ್ ಕಡೆಶಿವಾಲಯ ಸ್ವಾಗತಿಸಿದರು, ಗುರುಪ್ರಿಯಾ ಶಿವಾನಂದ್ ಕಾಮತ್ ವೈಯಕ್ತಿಕ ಗೀತೆ ಹಾಡಿದರು. ಚಿಂತನ್ ವಿನ್ಯಾಸ ಪ್ರತಿಜ್ಞಾವಿಧಿ ಭೋಧಿಸಿದರು. ಧನು ಸೆರ್ಕಳ ವಂದಿಸಿದರು. ಗಂಗಾಧರ ಗೌಡ ವಂದೇ ಮಾತರಂ ಹಾಡಿ, ದುರ್ಗಾ ಪ್ರಸಾದ್ ಕಡೆಶಿವಾಲಯ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *