ಬಂಟ್ವಾಳ: ಫರಂಗಿಪೇಟೆ ಸಮೀಪದ ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ ೧೬ ವರ್ಷಗಳ ಕಾಲ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಶಿಮಂಗಳ ವೈ. ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.


ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ,  ಶಾಲೆಯ ವಾತಾವರಣ ಚೆನ್ನಾಗಿದ್ದಾಗ ಶಿಕ್ಷಕರಿಂದ ಉತ್ತಮ‌ ಕಾರ್ಯವೈಖರಿಯನ್ನು ನಿರೀಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಶಶಿಮಂಗಳ ಅವರ ಸೇವೆಯನ್ನು ಇಡೀ ಶಾಲೆ ಸ್ಮರಿಸಲಿದೆ ಎಂದರು.


ನಿವೃತ್ತ ಮುಖ್ಯಶಿಕ್ಷಕಿ ಶಶಿಮಂಗಳ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪ್ರಭಾರ ಮುಖ್ಯಶಿಕ್ಷಕಿ ಗೀತಾ, ನಿವೃತ್ತ ಶಿಕ್ಷಕ‌ ಮಹಮ್ಮದ್ ತುಂಬೆ ಹಾಗೂ ಶಿಕ್ಷಕರಾದ ಮಮತಾ, ಹರಿಪ್ರಸಾದ್, ಹಿಲ್ಡಾ, ಜ್ಯೋತಿ, ಬೀನಾ, ಮನೋಹರ್ ಅವರು ನಿವೃತ್ತರ ಕುರಿತು ಮಾತನಾಡಿದರು.


ಪುದು ಗ್ರಾ.ಪಂ.ಅಧ್ಯಕ್ಷೆ ರಶೀದಾ ಬಾನು, ಉಪಾಧ್ಯಕ್ಷ ಇಕ್ಬಾಲ್ ಸುಜೀರು, ಮಾಜಿ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ, ಪ್ರಕಾಶ್ಚಂದ್ರ ರೈ ದೇವಸ್ಯ, ಮಾಜಿ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸದಸ್ಯರಾದ ವಿಷುಕುಮಾರ್, ಆತಿಕಾ, ಮಮ್ತಾಜ್, ರೆಹಾನ, ಮಾಜಿ ಸದಸ್ಯರಾದ ಭಾಸ್ಕರ ರೈ, ಕಿಶೋರ್ ಕುಮಾರ್, ಉದ್ಯಮಿ ಎಫ್.ಎಂ.ಬಶೀರ್ ಫರಂಗಿಪೇಟೆ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜೋಯಲ್ ಮೆಂಡೊನ್ಸಾ, ಎಸ್.ಡಿ.ಎಂ.ಸಿ ಸದಸ್ಯರಾದ ಝುಬೇರ್, ಚಂದ್ರಾವತಿ, ಭಾಸ್ಕರ, ಟುಡೇ ಪೌಂಢೇಶನ್ ಸದಸ್ಯ ಮಜೀದ್  ವೇದಿಕೆಯಲ್ಲಿ‌ಉಪಸ್ಥಿತರಿದ್ದರು. ಶಿಕ್ಷಕ ಜಯಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. 

By Suddi9

Leave a Reply

Your email address will not be published. Required fields are marked *