ಉಚಿತ ಯಕ್ಷಗಾನ ತರಗತಿಯು ಉದ್ಘಾಟನೆ
ಬಂಟ್ವಾಳ: ತಾಲೂಕಿನ ಕೇಪುದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ವಿಟ್ಲ ಘಟಕದ ಸಹಭಾಗಿತ್ವದಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ ಯೋಜನೆಯ ಯಕ್ಷಗಾನ ನಾಟ್ಯ ತರಬೇತಿ ಅಭಿಯಾನದ ಉಚಿತ ಯಕ್ಷಗಾನ ತರಗತಿಯು ಉದ್ಘಾಟನೆಗೊಂಡಿತು.

ಯಕ್ಷಗಾನ ಶಿಕ್ಷಕರಾದ ಗಣೇಶ ಕುಂದಲಕೋಡಿ ತರಗತಿಯನ್ನು ಉದ್ಘಾಟಿಸಿ ಯಕ್ಷಗಾನ ತರಗತಿಗೆ ಚಾಲನೆ ನೀಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವೆಂಕಟ ರಾಘವೇಂದ್ರ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಿಕೆ, ಕೇಪು ಉಳ್ಳಾಲ್ತಿ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಪಡಿಬಾಗಿಲು, ವಿಟ್ಲ ಘಟಕದ ಪ್ರಧಾನ ಸಂಚಾಲಕರಾದ ಅರವಿಂದ ರೈ ಮೂರ್ಜೆಬೆಟ್ಟು, ಸಂಘಟನಾ ಕಾರ್ಯದರ್ಶಿ ಭಾಸ್ಕರ ಶೆಟ್ಟಿ ವೀರಕಂಭ, ಗೌರವ ಮಾರ್ಗದರ್ಶಕರಾದ ಹರೀಶ ಬೊಳಂತಿಮೊಗರು, ಶ್ರೀ ಉಳ್ಳಾಲ್ತಿ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಉಮೇಶ ಕೊರತಿಗದ್ದೆ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಲಲಿತಾ ಕೋಡಂದೂರು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ರೈ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಭಾಗೀರಥಿ ಸ್ವಾಗತಿಸಿದರು. ಸಹಶಿಕ್ಷಕಿ ನೀತಾ ಮಾರ್ಸೆಲಿನ್ ಕ್ರಾಸ್ತಾ ಕೆ ವಂದಿಸಿದರು. ಸಹಶಿಕ್ಷಕಿ ಚಿನ್ನಮ್ಮ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಕೊನೆಯಲ್ಲಿ ಯಕ್ಷಗಾನ ಶಿಕ್ಷಕ ಗಣೇಶ ಕುಂದಲಕೋಡಿಯವರು ಸಾಂಕೇತಿಕವಾಗಿ ಯಕ್ಷಗಾನ ನಾಟ್ಯ ತರಬೇತಿಯನ್ನು ಆರಂಭಿಸಿದರು.