ಬಜಪೆ: ಎಕ್ಕಾರು ಸಮೀಪದ ಅರಸುಲೆ ಪದವು ಅಕ್ರಮ ಕೊರೆಗಳಿಗೆ ಇಂದು ತಶಿಲ್ದ್ದಾರ್ ಮತ್ತು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಬಜಪೆ ಸಮೀಪದ ಎಕ್ಕಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಸುಲೆಪದವು ಎಂಬಲ್ಲಿ ಸುಮಾರು ನೂರು ಎಕರೆ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕೆಂಪು ಕಲ್ಲಿನ ಕೋರೆಗೆ ಮಂಗಳೂರು ತಹಸೀಲ್ದಾರ್ ಮೋಹನ ರಾವ್ ಮತ್ತು ಗಣಿ ಮತ್ತು ಭೂವಿಜ್ಞಾನಿ ಅಧಿಕಾರಿ ನಾಗೇಂದ್ರಪ್ಪ ನೇತ್ರತ್ವದಲ್ಲಿ ಇಂದು ದಾಳಿ ನಡೆಸಿದ್ದಾರೆ.


ಅರಸುಲೆಪದವು ಪರಿಸರದಲ್ಲಿ ಸಾವಿರ ಎಕರೆ ಸರಕಾರಿ ಜಮೀನು ಇದ್ದು ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕೆಂಪು ಕಲ್ಲಿನ ಕೋರೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ದಕ್ಷಿಣ ಕನ್ನಡ ಜಿಲ್ಲಾಕಾರಿಗಳಿಗೆ ದೂರು ನೀಡಿದ್ದರು. ಜಿಲ್ಲಾಕಾರಿಗಳ ಆದೇಶದ ಮೇರೆಗೆ ತಹಸೀಲ್ದಾರ್ ನೇತೃತ್ವದ ಅಕಾರಿಗಳ ತಂಡ ಬುಧವಾರ ಸ್ಥಳ ತನಿಖೆ ನಡೆಸಿದೆ. ಗಣಿ ಇಲಾಖಾಧಿಕಾರಿಗಳು ಕೊರೆಗೆ ಸಂಬಧಿಸಿದ ಸಾಮಾಗ್ರಿಗಳನ್ನು ವಶ ಪಡಿಸಿಕೊಂಡಿದ್ದಾರೆ. ಅಲ್ಲದೆ ದಂಡವನ್ನು ವಿಧಿಸಿದ್ದಾರೆ.
ಹಿಂದಿನಿಂದಲೂ ಈ ಅಕ್ರಮ ಕೊರೆಯ ವಿರುದ್ಧ ಸ್ಥಳಿಯರು ದ್ವನಿ ಎತ್ತಿದ್ದು, ಲೋಕೋಪಯೋಗಿ ಇಲಾಖೆಯ ರಸ್ತೆಯನ್ನೆ ಅಗೆದು ಕೊರೆಯಾಗಿ ಪರಿವರ್ತಿಸಿದ್ದಾರೆ ಎನ್ನಲಾಗುತ್ತಿದೆ, ಇಲ್ಲಿ ಅನೇಕ ಬಾರಿ ಗಣಿ ಮತ್ತು ಭೂ ವಿಜ್ಜಾನ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಆದರೆ ಕೇವಲ ಕೆಲವೇ ದಿನದಲ್ಲಿ ಇದು ಪುನರಾರಂಭ ಗೊಳ್ಳುತ್ತದೆ, ಇಂದು ತಹಸೀಲ್ದಾರ್ ಮೋಹನ ರಾವ್ ಸ್ಥಳ ಪರಿಶೀಲನೆ ನಡೆಸಿದ್ದಾರೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಎಂಟನೇ ತಾರೀಖಿನಂದು ಸರ್ವೆ ಮಾಡಲಾಗುದು, ಒಂದು ವೇಳೆ ಸರಕಾರಿ ಸ್ಥಳದಲ್ಲಿ ಅಕ್ರಮ ಕೋರೆಗಳು ನಡೆಸಿದ್ದೇ ಆದಲ್ಲಿ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಲಲಾಗುದು ಎಂದಿದ್ದಾರೆ
:ನಿಶಾಂತ್ ಕಿಲೆಂಜೂರು.
