ಬಂಟ್ವಾಳ: ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪಟ್ಲ ಫೌಂಡೇಶನ್ ವತಿಯಿಂದ ನಡೆಯುವ ಉಚಿತ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ ನೆರವೇರಿಸಲಾಯಿತು.ಟ್ರಸ್ಟ್ ನ  ಬಂಟ್ವಾಳ ತಾಲೂಕು ಅಧ್ಯಕ್ಷ ರಾದ ಚಂದ್ರಹಾಸ ಶೆಟ್ಟಿ ದೀಪಬೆಳಗಿಸಿ ಉದ್ಘಾಟಿಸಿದರು.

ಯಕ್ಷಗುರು ಸಂದೇಶ್ ಮರಕಡ ,ಅಮ್ಮುಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ, ಉದ್ಯಮಿ  ಉಮೇಶ್ ಸಾಲ್ಯಾನ್, ರಾಮದಾಸ ಸಾಲ್ಯಾನ್, ಪ್ರಾಂಶುಪಾಲರಾದ  ಕವಿತಾ, ಉಪ ಪ್ರಾಂಶುಪಾಲರಾದ ಅನಂತಪದ್ಮನಾಭ ಶಿಬರೂರು
ಎಸ್ ಡಿ ಎಂ ಸಿ ಸದಸ್ಯರಾದ ಶಮೀಮ್,ಅಬ್ದುಲ್ ಸತ್ತಾರ್. ಬಾಲಕೃಷ್ಣ , ಶಾಂತಿ ,ಗೀತಾ ಉಪಸ್ಥಿತರಿದ್ದರು.ಇದೇ ವೇಳೆ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಪ್ರತಿಭಾ ಭಟ್ ಸ್ವಾಗತಿಸಿದರು.ಚೇತನವಾಣಿ ವಂದಿಸಿದರು.ಡೋಮಿ ಹಾಗೂ ಶಾಲಿನಿ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *