ಮುಂಬೈ : ಅನಾರೋಗ್ಯದಿಂದ  ಬಳಲುತ್ತಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎ.ಆರ್‌ ಅಂತುಲೆ ಮಂಗಳವಾರ ನಿಧನರಾದರು. ಮೃತರಿಗೆ 85 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಯುಪಿಎ–1ರ ಸರ್ಕಾರದಲ್ಲಿ ಅವರು ಅಲ್ಪಸಂಖ್ಯಾತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಮೃತರ ಅಂತ್ಯಕ್ರಿಯೆ ಬುಧವಾರ ರಾಯಗಢ ಜಿಲ್ಲೆಯ ಅಂಬೆಟ್‌ ಗ್ರಾಮದಲ್ಲಿ ನಡೆಯಲಿದೆ.

anthule

By Suddi9

Leave a Reply

Your email address will not be published. Required fields are marked *