ಕಿನ್ನಿಗೋಳಿ: ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಭುವನಾಭಿರಾಮ ಉಡುಪ ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭ ಮುಲ್ಕಿ ಮೂಡಬಿದ್ರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ಗ್ರಾ.ಪಂ ಸದಸ್ಯರಾದ ಆನಂದ ಗೌಡ, ರಘುರಾಮ ಪುನರೂರು, ಪಡುಪಣಂಬೂರು ಗ್ರಾ.ಪಂ ಸದಸ್ಯೆ ಲೀಲಾ ಭಂಜನ್, ಬಿಜೆಪಿ ಕಾರ್ಯಕರ್ತರಾದ ಆನಂದ ಶಾಂತಿಪಲ್ಕೆ, ಸುಬ್ರಾಯ, ದಿವಾಕರ ಕೆಮ್ರಾಲ್, ಶರತ್ ಕುಬೆವೂರು, ಪ್ರಭಾಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
