ಬಂಟ್ವಾಳ: ರೋಟರಿ ಕ್ಲಬ್ ಮೊಡಂಕಾಪು, ದಕ್ಷಿಣ ಕನ್ನಡ ಜಿಲ್ಲಾ ಸಂಚಾರಿ ನೇತ್ರ ಘಟಕ ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಪುದು
ಕಳ್ಳಿಗೆ ಗ್ರಾಮ ಪಂಚಾಯತ್, ಲಕ್ಷ್ಮಿವಿಷ್ಣು ಸೇವಾ ಸಂಘ ಜಾರಂದಗುಡ್ಡೆ, ಸೀನಿಯರ್ ಛೇಂಬರ್ ಬಿ.ಸಿ.ರೋಡ್(ಬಂಟ್ವಾಳ ನೇತ್ರಾವತಿ ಸಂಗಮ)
ಇವರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣೆ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಶುಕ್ರವಾರ ನಡೆಯಿತು.

ಮಾಣಿಯ ವೈದ್ಯ ಡಾ.ಮನೋಹರ್ ರೈ ಮಾಣಿ‌ ಮಾತನಾಡಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬನ ಜವಾಬ್ದಾರಿಯಾಗಿದೆ ಎಂದರು.

ವೆನ್ ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಡಾ. ಅನಿಲ್ ರಾಮಾನುಜಂ ಕಣ್ಣಿನ ಮತ್ತು ಅಂಗಾಂಗ ದಾನದ ಮಹತ್ವ ತಿಳಿಸಿದರು.
ಉದ್ಯಮಿಗಳಾದ ಅರುಣ್ ಶರ್ಮ ಪನ್ನಡ್ಕ, ದಿನಕರ್ ಬಂಜನ್ ಬರೆ, ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮಾಡಂಗೆ,  ಸಾಮಾಜಿಕ ಕಾರ್ಯಕರ್ತ ಶಶಿಪ್ರಭ ಗುತ್ತಹಿತ್ತಿಲು, ರೋಟರಿ ಕ್ಲಬ್ ಕಾರ್ಯದರ್ಶಿ ಅಲೆಕ್ಸಾಂಡರ್ ಲೋಬೊ, ಸೀನಿಯರ್ ಛೇಂಬರ್ ಉಪಾಧ್ಯಕ್ಷ ಡಾ. ಆಧಿರಾಜ್ ಜೈನ್, ಸೀನಿಯರ್ ಚೇಂಬರ್ ಕೋಶಾಧಿಕಾರಿ ಸತ್ಯನಾರಾಯಣ ರಾವ್, ಗ್ರಾಮ ಪಂ. ಸದಸ್ಯ ಮನೋಜ್ ವಳವೂರು, ವೆನ್ ಲಾಕ್ ನೇತ್ರ ತಜ್ಞ ಡಾ.ಪ್ರೇರಣಾ, ಪಿಡಿಒ ಚಂದ್ರಾವತಿ, ಲಕ್ಷ್ಮಿ ವಿಷ್ಣು ಸಂಘದ ಅಧ್ಯಕ್ಷ ಸುಧೀಂದ್ರ, ಉಪಸ್ಥಿತರಿದ್ದರು.

ರೋಟರಿ  ಅಧ್ಯಕ್ಷ ಪಿ.ಎ.ರಹೀಂ ಅದ್ಯಕ್ಷತೆ ವಹಿಸಿದ್ದರು. ಸೀನಿಯರ್ ಛೇಂಬರ್ ಅದ್ಯಕ್ಷ ಡಾ.ಆನಂದ್ ಬಂಜನ್ ಸ್ವಾಗತಿಸಿ, ಸೀನಿಯರ್ ಛೇಂಬರ್ ಸ್ಥಾಪಕಾದ್ಯಕ್ಷ ಜಯಾನಂದ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು, ಸುದೀರ್ ಜಾರಂದಗುಡ್ಡೆ ವಂದಿಸಿದರು.

ಸುಮಾರು 118 ಮಂದಿ  ಶಿಬಿರದ ಪ್ರಯೋಜನ ಪಡೆದರು. 65 ಮಂದಿಗೆ ಸ್ಥಳದಲ್ಲೇ ಕನ್ನಡಕ ವಿತರಿಸಲಾಯಿತು. 16 ಮಂದಿಗೆ ಕಣ್ಣಿನ ಪೊರೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು. 

By suddi9

Leave a Reply

Your email address will not be published. Required fields are marked *