ಬಂಟ್ವಾಳ: ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಏಮಾಜಿ ಕಿರಿಯ ಪ್ರಾಥಮಿಕ ಶಾಲೆಗೆ  ದಿ. ಕೆ. ಎನ್.  ಕೇಶವ ಆಳ್ವ  ಕರಿಂಕ ಹೊಸಮನೆಯವರ ಸ್ಮರಣಾರ್ಥ ಮಂಗಳೂರು ಎ.ಜೆ ಸಂಶೋಧನಾ ಕೇಂದ್ರನ ಗ್ಯಾಸ್ಟ್ರೋ ಸರ್ಜನ್ ಡಾ. ಅಶ್ವಿನ್ ಆಳ್ವ ರವರು  ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಕೊಡುಗೆಯಾಗಿ ನೀಡಲಾದ ನೂತನ  “ಜ್ಞಾನ ದೀವಿಗೆ” ಕಂಪ್ಯೂಟರ್ ಕೊಠಡಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ದಿವಂಗತ ಕೆ ಎಂ ಕೇಶವ ಆಳ್ವ ರವರ ಪತ್ನಿ ಶ್ರೀಮತಿ ಆಳ್ವ ರವರು ದೀಪ ಪ್ರಜ್ವಲಿಸುವ ಮೂಲಕ ಕೊಠಡಿಯನ್ನು ಉದ್ಘಾಟಿಸಿದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಶಿಕ್ಷಣದಿಂದ ಸರಕಾರಿ ಶಾಲೆ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಡಾ. ಅಶ್ವಿನ್ ಆಳ್ವರ ಈ ಕೊಡುಗೆ  ಶ್ಲಾಘನೀಯವಾಗಿದ್ದು, ಕೊಠಡಿಯ ಪೂರ್ಣ ವೆಚ್ಚವನ್ನು ಒಬ್ಬರೇ ಬರಿಸುವ ಮೂಲಕ ತನ್ನ ಊರಿನ ಸರಕಾರಿ ಶಾಲೆಯ ಮೇಲಿನ ಪ್ರೀತಿಯನ್ನು ತೋರಿಸಿದೆ ಎಂದರು.

ಇದೇ ವೇಳೆ ಶಾಲೆಯ ಪರವಾಗಿ  ಶ್ರೀಮತಿ ಕೇಶವ ಆಳ್ವ, ಅನೂಪ್ ಆಳ್ವ, ಅನುಷಾ ಆಳ್ವ ಅವರನ್ನು ಗೌರವಿಸಲಾಯಿತು.  ಶಾಲಾ  ಎಸ್ ಡಿ ಎಂ ಸಿ ಅಧ್ಯಕ್ಷ ಮಲ್ಲಿಕಾ ಗಣೇಶ್, ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ, ಸದಸ್ಯರು, ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ಸ್ವಾಗತಿಸಿ, ಸಹ ಶಿಕ್ಷಕ ಉದಯಚಂದ್ರ ವಂದಿಸಿದರು, ಗೌರವ ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *