ಕೈಕಂಬ: ಮಹಿಳಾ ಸಬಲೀಕರಣ ಹಾಗೂ ದೌರ್ಜನ್ಯ ಮುಕ್ತ ಸಮಾಜ ನಿರ್ಮಿಸಲು ಸಾಮಾಜಿಕ ತಾಣಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ನಿವೃತ್ತ ಉಪನ್ಯಾಸಕರಾದ ಮಾಧವ ಮಯ್ಯ ಹೇಳಿದ್ದಾರೆ.
ಅವರು ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಹಾಗೂ ಪ್ರೇರಣಾ ಮಹಿಳಾ ಸ್ವಸಹಾಯ ಸಂಗಗಳ ಒಕ್ಕೂಡ ಕೈಕಂಬ ಇದರ ವತಿಯಿಂದ ಗುರುಪುರ ಕೈಕಂಬದಲ್ಲಿ ನಡೆದ ಮಹಿಳಾ ಸಬಲೀಕರಣ ಮತ್ತು ದೌರ್ಜನ್ಯ ಮುಕ್ತ ಸಮಾಜಕ್ಕೆ ಮಹಿಳೆಯರ ಪಾತ್ರದ ಕುರಿತಾಗಿ ಮಾತಾಡುತ್ತಿದ್ದರು.

ಇಂದು ಮಹಿಳಾ ದೌರ್ಜನ್ಯದ ಕುರಿತು ಜಾಗೃತಿ ಮೂಡಿಸುವುದು ತುಂಬಾ ಸುಲಭದ ಕೆಲಸ. ಫೇಸ್ ಬುಕ್ ಹಾಗೂ ವಾಟ್ಸಾಪ್ನಂತಹ ಸಾಮಾಜಿಕ ತಾಣಗಳಲ್ಲಿ ಒಂದು ಸಂದೇಶ ಕಳಿಸಿದರೆ ಸಾಕು, ಅದು ಯಾವ ಮೂಲೆಗೂ ಬಂದು ತಲುಪುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮುಖಂಡರಾದ ವಿನೋದ್ ಮಾಡ ವಹಿಸಿದ್ದರು. ಜೆರಾಲ್ಡ್ ರಸ್ಕಿನ್ಹಾ ಕಾರ್ಯಕ್ರಮ ಉದ್ಘಾಟಿಸಿದರು. ಅಥಿತಿಗಳಾಗಿ ವಿಜಯ ಜಿ. ಸುವರ್ಣ. ಮಂಜುಳಾ, ಪತ್ರಕರ್ತ ಸುರೇಶ್ ಶೆಟ್ಟಿ, ಭರತ್ ಕರ್ಕೇರಾ ಮುಂತಾದವರು ವಹಿಸಿದ್ದರು




