ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬಿ.ಸಿ. ಟ್ರಸ್ಟ್ ಇದರ ವತಿಯಿಂದ ಪಾಣೆಮಂಗಳೂರು ವಲಯದ ಶಂಭೂರು ಒಕ್ಕೂಟದ ಶ್ರೀ ನಿಧಿ ಸಂಘದ ಸದಸ್ಯರಾದ ಸುಜಾತ ಸತೀಶ್ ಇವರ ಮನೆಗೆ ಸಿಡಿಲು ಬಡಿದು ಹಾನಿಯಾಗಿರುವ ಹಿನ್ನಲೆಯಲ್ಲಿ ಪರಿಹಾರ ಚೆಕ್ ನ್ನು ಬಂಟ್ವಾಳ ತಾಲೂಕು ಯೋಜನಾಧಿಕಾರಿ  ಮಾಧವ ಗೌಡ  ವಿತರಿಸಿದರು.

ಈ ಸಂದರ್ಭದಲ್ಲಿ ನರಿಕೊಂಬು ಪಂಚಾಯತ್ ಸದಸ್ಯರಾದ ಪ್ರಕಾಶ್ ಮಡಿಮಗೆರು, ಪಾಣೆಮಂಗಳೂರು ವಲಯ ಮೇಲ್ವಿಚಾರಕಿ ಅನಿತಾ, ಒಕ್ಕೂಟ ಸೇವಾಪ್ರತಿನಿ ಲಕ್ಷ್ಮೀ ಪ್ರಕಾಶ್, ಜೊತೆಗಿದ್ದರು. 

By suddi9

Leave a Reply

Your email address will not be published. Required fields are marked *