ಬಂಟ್ವಾಳ:  ಗಣೇಶ್ ಚತುರ್ಥಿ ಹಬ್ಬವನ್ನು ಬಂಟ್ವಾಳದಾದ್ಯಂತ ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಬಂಟ್ವಾಳ ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಸಮಾಜದ ಪ್ರಮುಖರ ಸಭೆ ನಡೆಯಿತು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಸ್.ಐ.ಹರೀಶ್ ಅವರ ಅಧ್ಯಕ್ಷತೆಯಲ್ಲಿ‌ ಹಾಗೂ ನಗರ ಪೊಲೀಸ್ ಠಾಣೆಯಲ್ಲಿ ಇ‌ನ್ಸ್‌ಪೆಕ್ಟರ್ ನಾಗರಾಜ್ ಎಚ್ ಅವರ ಅಧ್ಯಕ್ಷತೆಯಲ್ಲಿ  ಸಭೆ ನಡೆಯಿತು.

ಗಣೇಶ ಚತುರ್ಥಿ ಆಚರಣೆ ಬಳಿಕ ನಡೆಯುವ ಶೋಭಾಯಾತ್ರೆಯ ವೇಳೆ ಅನುಸರಿಸಬೇಕಾದ  ಸರಕಾರದ ನಿಯಮಗಳ ಬಗ್ಗೆ  ಮಾಹಿತಿ ಸಭೆಯಲ್ಲಿ ಪ್ರಮುಖರಿಗೆ ಮಾಹಿತಿ ನೀಡಲಾಯಿತು.

ಡಿ.ಜೆ.ಗೆ ಅವಕಾಶವಿಲ್ಲ:
ಗಣೇಶನ ವಿಗ್ರಹದ ಪ್ರತಿಷ್ಠಾಪನ ಸ್ಥಳದಲ್ಲಿ  ರಾತ್ರಿ ಪಾಳಿಯಲ್ಲಿ ಅಲ್ಲಿನ ಸ್ವಯಂ ಸೇವಕರೇ ಕಾಯಬೇಕು,ವಿವಾದಸ್ಪದ ಬರವಣಿಗೆಯ ಬ್ಯಾನರ್ ಅಳವಡಿಸಲು ಅವಕಾಶವಿರುವುದಿಲ್ಲ,ಸ್ಥಳೀಯಾಡಳಿತ ಸಂಸ್ಥೆ,ಮೆಸ್ಕಾಂ,ಅಗ್ನಿಶಾಮಕ ದಳದ ಅನುಮತಿಯನ್ನು ಸಂಘಟಕರು ಪಡೆದುಕೊಳ್ಳಬೇಕು,ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ತಾತ್ಕಾಲಿಕ  ಸಿ.ಸಿ.ಟಿ.ವಿ ಅಳವಡಿಸಬೇಕು,ಗಣೇಶನ ಶೋಭಾಯಾತ್ರೆಯ ವೇಳೆ  ಡಿ.ಜೆ.ಗೆ ಅವಕಾಶವಿರುವುದಿಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.ಯಾವುದೇ ರೀತಿಯ ಗೊಂದಲ,ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ  ಶಿಸ್ತುಬದ್ದವಾಗಿ ಮೆರವಣಿಗೆ ನಡೆಸುವಂತೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ನಗರ ಪೋಲೀಸ್ ಠಾಣಾ ಎಸ್. ಐ.ರಾಮಕೃಷ್ಣ, ಟ್ರಾಫಿಕ್ ಎಸ್.ಐ.ಸುತೇಶ್ ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *