ಮೂಡಬಿದಿರೆ: ಬ್ರಹ್ಮ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ.) ಶ್ರೀ ನಾರಾಯಣಗುರು ಸೇವಾದಳ ಹಾಗೂ ಶ್ರೀ ನಾರಾಯಣಗುರು ಮಹಿಳಾ ಘಟಕ ಮೂಡುಬಿದಿರೆ, ಬ್ರಹ್ಮ ಶ್ರೀ ನಾರಾಯಣ ಗುರುಗಳ ೧೬೯ನೇ ಜನ್ಮದಿನಾಚರಣೆ, ಸಂಘದ ೭೩ನೇ ಮತ್ತು ಮೂರ್ತಿ ಪ್ರತಿಷ್ಟಾಪನೆಯ ೩೭ನೇ ವಾರ್ಷಿಕೋತ್ಸವ ಸಮಾರಂಭದ,ಸಭಾ ಕಾರ್ಯಕ್ರಮ ಸೆ.೩ರಂದು ಭಾನುವಾರ ಮೂಡುಬಿದಿರೆ ಕಾಮಧೇನು ಸಭಾ ಭವನದಲ್ಲಿ ಜರಗಲಿದೆ.

ಅಧ್ಯಕ್ಷತೆಯನ್ನು ನೋಟರಿ ವಕೀಲರಾದ ಸುರೇಶ್ ಕೆ. ಪೂಜಾರಿವಹಿಸಲಿದ್ದಾರೆ. ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ತುಳುವಿದ್ವಾಂಸರು ಅರುಣ್ ಉಳ್ಳಾಲ್ ನಾರಾಯಣ ಗುರುಗಳ ಸಂದೇಶವನ್ನು ನೀಡಲಿದ್ದಾರೆ.

ಮುಖ್ಯ ಅಥಿತಿಗಳಾಗಿ ಮುಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್,ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಜಯರಾಜ್ ಅಮೀನ್, ದ.ಕ.ಜಿಲ್ಲೆ ಜಿಲ್ಲಾಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಂಗಳೂರು ಜಿನೇಂದ್ರ ಕೋಟ್ಯಾನ್, ಮಂಗಳೂರು ಸರಕಾರಿ ವೆನಲಾಕ್ ಆಸ್ಪತ್ರೆ ಮೂತ್ರರೋಗ ತಜ್ಞರು ಡಾ|| ಸದಾನಂದ ಪೂಜಾರಿ , ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಮಂಗಳೂರು ಶಬರಿ ಟ್ರಾವೆಲ್ಸ್ ಮಾಲಕ ಸದಾನಂದ ಪೂಜಾರಿ ಮುಂತಾದವರ ಉಪಸ್ಥಿತಿತರಿರುವರು.
ನಿರ್ದೇಶಿತ ಕರ್ನಾಟಕ ಉಚ್ಚ ನ್ಯಾಯಲಯದ ಹಿರಿಯ ವಕೀಲರಿಗೆ ಹಾಗೂ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟುವಿಗೆ ಸನ್ಮಾನ.
ನಿರ್ದೇಶಿತ ಕರ್ನಾಟಕ ಉಚ್ಚ ನ್ಯಾಯಲಯದ ಹಿರಿಯ ನ್ಯಾಯವಾದಿಗಳಾದ ಇರುವೈಲು ತಾರಾನಾಥ ಪೂಜಾರಿ, ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಕು.ಅಕ್ಷತಾ ಪೂಜಾರಿ ಬೋಳ,ಅವರನ್ನು ಸನ್ಮಾನಿಸಲಾಗುವುದು.
ಎಂದು ಮೂಡುಬಿದಿರೆ ಶ್ರೀ ನಾರಾಯಣಗುರು ಸೇವಾದಳದ ಅಧ್ಯಕ್ಷ ಶ್ರೀರಾಜ್ ಸನಿಲ್, ಮೂಡುಬಿದಿರೆ ಶ್ರೀನಾರಾಯಣಗುರು ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಕೇಶವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
