ಬಂಟ್ವಾಳ: ಭಾರತೀಯ ಜನತಾ ಪಕ್ಷ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸದಸ್ಯತಾ ಅಭಿಯಾನ ಕಾರ್ಯಗಾರ ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿ,ಜೆ.ಪಿ.ಜಿಲ್ಲಾಧ್ಯಕ್ಷರಾದ ಪ್ರತಾಪಸಿಂಹ ನಾಯಕ್ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು, ಕಾಂಗ್ರೇಸ್ ಮುಕ್ತ ಭಾರತದ ಮೋದಿಯವರ ಕನಸನ್ನು ನನಸು ಮಾಡಬೇಕಾದರೆ ಬಿ.ಜೆ.ಪಿಯನ್ನು ಸರ್ವ ವ್ಯಾಪಿ, ಸರ್ವ ಸ್ಪಶರ್ಿಯನ್ನಾಗಿ ಮಾಡಬೇಕೆಂದು ಹೇಳಿದರು. ಅದು ಪ್ರತಿ ಮನೆಯಿಂದ ಬೆ.ಜೆ.ಪಿ.ಸದಸ್ಯರ ನೊಂದಾವಣೆಯಿಂದ ಮಾತ್ರ ಸಾಧ್ಯ ಎಂದರು. ಮುಂದಿನ ಮೂರು ತಿಂಗಳು ಕಾರ್ಯಕರ್ತರು ಸದಸ್ಯತಾ ಅಭಿಯಾನವನ್ನು ಮಾಡಿ ಎಂದು ಕರೆ ನೀಡಿದರು.

2   4-6  1  copy
ಕಾರ್ಯಗಾರದ ಮಾಹಿತಿ ಶಿಭಿರವನ್ನು ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸಂಜೀವ ಮಠಂದೂರು ನಡೆಸಿದರು.
ವೇದಿಕೆಯಲ್ಲಿ ಕ್ಷೇತ್ರ ಬಿ.ಜೆ.ಪಿ.ಅಧ್ಯಕ್ಷ ಜಿ.ಆನಂದ, ಬಂಟ್ವಾಳ, ಪ್ರಧಾನ ಕಾರ್ಯದಶರ್ಿ ದೇವಪ್ಪ ಪೂಜಾರಿ, ಪ್ರಮುಖರಾದ ರುಕ್ಮಯ ಮೂಜಾರಿ ಪದ್ಮನಾಭ ಕೊಟ್ಟಾರಿ, ಸುಲೋಚನಾ ಜಿ.ಕೆ.ಭಟ್, ಚಂದ್ರಹಾಸ್ ಉಳ್ಳಾಲ್, ಚೆನ್ನಪ್ಪ ಕೋಟ್ಯಾನ್, ಬ್ರಿಜೇಶ್ ಚೌಟ, ಆನಂದ ಶಂಭೂರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದಶರ್ಿ ರಾಮ್ದಾಸ್ ಸ್ವಾಗತಿಸಿ ದಿನೇಶ್ ಅಮ್ಟೂರು ವಂದಿಸಿದರು.

By suddi9

Leave a Reply

Your email address will not be published. Required fields are marked *