ಸುದ್ದಿ9 ಪಣೋಲಿಬೈಲು : ಬಂಟ್ವಾಳ ತಾಲೂಕಿನ ಸಜಿಪ ಮೂಡ ಗ್ರಾಮದ “ಕಾರ್ಣಿಕದ ಕಲ್ಲುರ್ಟಿ ” ಎಂದೇ ಪ್ರಖ್ಯಾತಿ  ಪಡೆದ ಪುಣ್ಯ ಕ್ಷೇತ್ರದಲ್ಲಿ ಇದೀಗ ಪಣೋಳಿ ಬೈಲ್ ನಲ್ಲಿ ವರ್ಷಾವಧಿ ಕೋಲ ಸೇವೆಯ ಸಡಗರ ಸಂಭ್ರಮ.

 ನ.25ರ ಮಂಗಳವಾರ ರಾತ್ರಿ  1ಗಂಟೆಯಿಂದ ಬೆಳಗ್ಗಿನವರೆಗೆ  ಕಲ್ಲುರ್ಟಿ ದೈವದ ಕೋಲವು ನೆರದಿದ್ದ  ಸಾವಿರಾರು ಜನರ ಸಮ್ಮುಖದಲ್ಲಿ ಬಹಳ  ವಿಜ್ರಂಭಣೆಯಿಂದ ಜರಗಿತು. ಕಲ್ಲುರ್ಟಿ  ದೈವವು   ಕ್ಷೇತ್ರದ ಮುಂಭಾಗದಲ್ಲಿ  ನೆರದಿದ್ದ  ಭಕ್ತರಿಗೆ ಗಂಧ ಪ್ರಸಾದ ನೀಡಿ  ಅಭಯ ನೀಡಿ ಹರಸಿತು.

Panolibail  -  ಪಣೋಲಿಬೈಲು
Panolibail – ಪಣೋಲಿಬೈಲು
Panolibail  -  ಪಣೋಲಿಬೈಲು
Panolibail – ಪಣೋಲಿಬೈಲು

ಡಾ.ಅಶೋಕ್ ಡಿ. ಆರ್. ಸಹಾಯಕ ಉಪಕಮಿಷನರ್ ಮಂಗಳೂರು ಹಾಗೂ ಆಡಳಿತಧಿಕಾರಿ, ಶ್ರೀ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ಅರ್ಚಕ ವೃಂದದವರು ಊರ ಹಾಗೂ ಪರವೂರ ಭಕ್ತಾಧಿಗಳು ಸೇವೆಯಲ್ಲಿ ಪಾಲ್ಲ್ಗೋಂಗೊಂಡಿದ್ದರು.

ನ.24ರಂದು ಸೋಮವಾರ ಸಾಯಂಕಾಲ 5-59ಕ್ಕೆ ಕೊಪ್ಪರಿಗೆ ಮೂಹೂರ್ತ, 6ರಿಂದ ಪಣೋಲಿಬೈಲ್ ಭಜನಾ ಮಂಡಳಿಯವರಿಂದ ಕುಣಿತ ಭಜನೆ, 7 ಗಂಟೆಗೆ ಕುಮಾರಿ ಶ್ರಾವ್ಯ ಕೊಲ್ಯ ಇವರಿಂದ ಭರತನಾಟ್ಯ, 7.30ರಿಂದ ಮಂಗಳೂರಿನ ಊರ್ವ ಎಂಬಲ್ಲಿನ ನರ್ತನ ಕಲಾವಿದರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ, ರಾತ್ರಿ 9 ರಿಂದ ಬಿಸಿರೋಡ್ ಎಕ್ಸಡ್ರಮ್ ಇವರಿಂದ ಡ್ಯಾನ್ಸ್, ಬಲೆ ತೆಲಿಪಾಲೆ ಖ್ಯಾತಿಯ ಅರುಣ್ ಚಂದ್ರ ಬಿ.ಸಿ.ರೋಡ್ ಹರಿಣಿ ಕಲಾವಿದರು ನಟಿಸಿರುವ “ತೆಲಿಕೆದ ಸಮ್ಮಾನ ” ತುಳು ಹಾಸ್ಯಮಯ ನಾಟಕ ನಡೆಯಿತು.

ನ.25ರಂದು ಮಂಗಳವಾರ ಬೆಳಗ್ಗೆ ನವಕಳಸ ಪ್ರಧಾನ,  12 ತೆಂಗಿನಕಾಯಿ ಗಣಹೋಮ, 11ಕ್ಕೆ ನಾಗ ತಂಬಿಲ, ಮಧ್ಯಾಹ್ನ 1ಗಂಟೆಯಿಂದ ಅನ್ಣದಾನ, 3.30ರಿಂದ ನಾನಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ. ಶ್ರೀ ಕ್ಷೇತ್ರಕ್ಕೆ ಮೆರವಣಿಗೆ, ವಿವಿಧ ಗ್ರೂಪ್ ಡ್ಯಾನ್ಸ್ ಕಾರ್ಯಕ್ರಮ, ನಂತರ ಲಕುಮಿ ತಂಡದ ಕಲಾವಿದರಿಂದ ತುಳು ಹಾಸ್ಯಮಯ ನಾಟಕ ಹೀಗೆ ಹತ್ತುಹಲವು ಕಾರ್ಯಕ್ರಮಗಳು ಜರುಗಿದವು.

 

Panolibail  -  ಪಣೋಲಿಬೈಲು

Panolibail  -  ಪಣೋಲಿಬೈಲು
Panolibail – ಪಣೋಲಿಬೈಲು
Panolibail  -  ಪಣೋಲಿಬೈಲು
Panolibail – ಪಣೋಲಿಬೈಲು
Panolibail  -  ಪಣೋಲಿಬೈಲು
Panolibail – ಪಣೋಲಿಬೈಲು
Panolibail  -  ಪಣೋಲಿಬೈಲು
Panolibail – ಪಣೋಲಿಬೈಲು
Panolibail  -  ಪಣೋಲಿಬೈಲು
Panolibail – ಪಣೋಲಿಬೈಲು
Panolibail  -  ಪಣೋಲಿಬೈಲು
Panolibail – ಪಣೋಲಿಬೈಲು

DSC_5401

 

Panolibail  -  ಪಣೋಲಿಬೈಲು
Panolibail – ಪಣೋಲಿಬೈಲು

 

ಚಿತ್ರಗಳು:  ಮಧು ಕುಮಾರ್  ಕಲ್ಲಡ್ಕ

By Suddi9 Author

Suddi9

Leave a Reply

Your email address will not be published. Required fields are marked *