ಬಂಟ್ವಾಳ: ಸರ್ವೇ  ಇಲಾಖೆಯಲ್ಲಿ ಮತ್ತು ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗಾಗುವ ತೊಂದರೆಯ ಬಗ್ಗೆ ಸಭೆ ತಾ.ಪಂ.ಅಧ್ಯಕ್ಷ ಯಶವಂತ ಡಿ. ಅಧ್ಯಕ್ಷತೆಯತೆಯಲ್ಲಿ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು. ಸರ್ವೇ  ಇಲಾಖೆಯಲ್ಲಿ ಸಾರ್ವಜನಿಕರ ಜಮೀನಿನ ಸರ್ವೇ , ಅಂಗನವಾಡಿ, ಸ್ಮಶಾನ ಮತ್ತು ಶಾಲೆಯ ಜಮೀನಿನ ಬಗ್ಗೆ ಸರ್ವೇ  ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು. ಇದರಿಂದಾಗಿ ತಾಲೂಕಿನ ಜನರು ಸಾಕಷ್ಟು ತೊದರೆ ಅನುಭವಿಸುವಂತಾಗಿದೆ ಎಂದು ಸಭೆಯ ಮುಂದಿಟ್ಟರು. ಈ ಸಂದರ್ಭ ಅಧ್ಯಕ್ಷರು ಇನ್ನು ಮುಂದೆ ಇಂತಹ ಯಾವುದೇ ರೀತಿಯ ದೂರುಗಳು ಸಾರ್ವಜನಿಕರಿಂದ ಬರಕೂಡದು ಎಂದು ಸರ್ವೇ  ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ನಿಗದಿತ ಸಮಯದಲ್ಲಿ ಸರ್ವೇ ಕೆಲಸಗಳನ್ನು ಮಾಡಿ ಮುಗಿಸುವಂತೆ ತಿಳಿಸಿದರು. ಸಭೆಯಲ್ಲಿ ದಿನೇಶ್ ಅಮ್ಟೂರು, ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ತಹಶೀಲ್ದಾರ್ ಮಲ್ಲೇಸ್ವಾಮಿ, ಕಾರ್ಯನಿವರ್ಾಹಣಾಧಿಖಾರಿ ಸಿಪ್ರೀಯನ್ ಮಿರಾಂದ, ಆನಂದ ಶಂಭೂರು, ಪುಷ್ಪಲತಾ ಕಕರ್ೇರ, ರಮೇಶ್ ಕುಮ್ಡೇರ್, ಹರಿಕೃಷ್ಣ ಶೆಟ್ಟಿ, ಜುಲಿಯಾನ ಮೇರಿ, ಲವೀನ ಡಿ.ಸೋಜ,ಗುಣವತಿ ಮತ್ತಿರರು ಉಪಸ್ಥಿತರಿದ್ದರು.

 

sarve

 

sarve2

By suddi9

Leave a Reply

Your email address will not be published. Required fields are marked *